ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಬೊಳ್ಳಿ ಪರ್ಬ ಕಾರ್ಯಕ್ರಮ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸಭಾಂಗಣದಲ್ಲಿ ಮದರು ಮಹಾಮಾತೆ ವೇದಿಕೆಯಲ್ಲಿ ಭಾನುವಾರ ಜರಗಿತು. ಜಿಲ್ಲಾ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮೊಗೇರ ಸಮಾಜವು ಜಾನಪದ ಲೋಕಕ್ಕೆ ನೀಡಿದ ಕೊಡುಗೆಯು ಅಪಾರ. ಸಂಘಟನೆಯ ಮೂಲಕ ಸಮಾಜವು ಬಲಿಷ್ಠವಾಗಬೇಕು ಎಂದರು.
ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಅಂಗಾರ ಅಜಕ್ಕೊಡು, ಕಾರ್ಯದರ್ಶಿ ಹರಿರಾಮ ಕುಳೂರು, ಜಿಲ್ಲಾ ಮೊಗೇರ ಸಂಘದ ಕಾರ್ಯದರ್ಶಿ ಹರಿಶ್ಚಂದ್ರ ಪುತ್ತಿಗೆ, ಸಂಚಾಲಕ ರವಿಕಾಂತ ಕಡಾರು, ಬೊಳ್ಳಿಪರ್ಬ ಸಮಿತಿ ಕಾರ್ಯಾಧ್ಯಕ್ಷ ಗೋಪಾಲ ದರ್ಬೆತಡ್ಕ, ಚಲನಚಿತ್ರ ನಟ ರವಿ ರಾಮಕುಂಜ, ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಶಂಕರ ದರ್ಬೆತಡ್ಕ, ಕರ್ನಾಟಕ ಡೆಪ್ಯೂಟಿ ತಹಶೀಲ್ದಾರ್ ವಿಜಯ ವಿಕ್ರಂ, ನಿವೃತ್ತ ಎಸ್‍ಐ ಸೋಮಯ್ಯ, ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಾಬು ಬಂದ್ಯೋಡು, ಪುತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯ ಕೇಶವ, ಮಹಿಳಾ ಘಟಕ ಸದಸ್ಯೆ ಬೇಬಿಶಾಲಿನಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಹರಿಶ್ಚಂದ್ರ ಪುತ್ತಿಗೆ ಸ್ವಾಗತಿಸಿ, ಕಾರ್ಯಾಧ್ಯಕ್ಷ ಗೋಪಾಲ ಡಿ ವಂದಿಸಿದರು. ಸಭಾಕಾರ್ಯಕ್ರಮದ ನಂತರ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಬೊಳ್ಳಿ ಪರ್ಬ ಸಂಪನ್ನ
0
ಡಿಸೆಂಬರ್ 27, 2022