ತಿರುವನಂತಪುರಂ: ಶ್ರೀಮದ್ ಭಗವದ್ಗೀತೆ, ಶ್ರೀ ಶಂಕರ ಭಾಷ್ಯದಂತಹ ಉದ್ಗ್ರಥಗಳ ಜನ್ಮಸ್ಥಳವಾದ ಭಾರತದಲ್ಲಿ ಹುಟ್ಟಿ, ಬದುಕಿ, ಭಗವಂತನ ಸಾಕ್ಷಾತ್ಕಾರಕ್ಕಾಗಿ ಶ್ರಮಿಸುತ್ತಿರುವುದು ಶ್ರೇಯಸ್ಕರ ಎಂದು ಮಜ್ಜಗದ್ಗುರು ಶಂಕರಾಚಾರ್ಯ ಪುರಿ ಮಠಾಧಿಪತಿ ಶ್ರೀನಿಶ್ಚಲಾನಂದ ಸರಸ್ವತೀ ಶ್ರೀಗಳು ತಿಳಿಸಿದರು.
ತಿರುವನಂತಪುರದಲ್ಲಿ ನಡೆದ 38ನೇ ಅಖಿಲ ಭಾರತ ಶ್ರೀಮದ್ ಭಾಗವತ ಮಹಾಸತ್ರದಲ್ಲಿ ಕಿಕ್ಕಿರಿದ ಸಭಿಕರ ಸಮ್ಮುಖದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಧರ್ಮ ವಿಚಾರಗಳಿಂದ ಬ್ರಹ್ಮವಿಚಾರದ ಮೂಲಕ ಭಗವಂತನ ಸಾಕ್ಷಾತ್ಕಾರವನ್ನು ತಲುಪುವಂತೆ ಪ್ರೇರೇಪಿಸುವ ಉಪನಿಷತ್ತುಗಳಲ್ಲಿರುವ ತತ್ವವೇ ಭಗವದ್ಗಿತೆ ಮತ್ತು ಶ್ರೀಮದ್ ಭಾಗವತದಲ್ಲಿ ಅಡಗಿದ್ದು, ಸ್ಪಷ್ಟವಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. ಸತ್ರದ ಸಂಘಟಕರು ಸತ್ರವೇದಿಯಲ್ಲಿ ವೇದ ಮಂತ್ರ ಪಠಣದೊಂದಿಗೆ ಪೂರ್ಣಕುಂಭ ಅರ್ಪಿಸಿ ಸ್ವಾಮೀಜಿಯವರನ್ನು ಸ್ವಾಗತಿಸಿದರು.
ಸತ್ರವೇದಿಕೆಯಾದ ಶ್ರೀಕೃಷ್ಣ ದೇವಸ್ಥಾನದಲ್ಲಿ ಸ್ವಾಮಿಗಳು ದೀಪಪೂಜೆ ಸಲ್ಲಿಸಿ ಫಲ ಪ್ರಸಾದ ಸ್ವೀಕರಿಸಿದರು. ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಷ್ಟದ್ರವ್ಯ ಮಹಾಗಣಪತಿ ಹೋಮದೊಂದಿಗೆ ಉದ್ಘಾಟನೆಗೊಂಡ ಸತ್ರದ ಕಾರ್ಯಕ್ರಮಗಳಲ್ಲಿ ಭಾಗವತ ಪಾರಾಯಣದ ಬಳಿಕ ಅಂಬಲಪುಳ ಬಾಲಚಂದ್ರನ್ ಅವರಿಂದ ಬಾಲಲೀಲೆಗಳು, ವತ್ಸಸ್ತೇಯಂ ತೊಟ್ಟಂ ಶ್ಯಾಮನ್ ನಂಬೂದಿರಿ ಅವರಿಂದ ಕಾಳಿಯ ಮರ್ಧನ ಹಾಗೂ ಸುಂದರೇಶನ್ ಹಾಗೂ ಅಂಬಲಪುಳ ಸುಕುಮಾರನ್ ನಾಯರ್ ಅವರಿಂದ ಕಾತ್ರ್ಯಾಯನಿ ವ್ರತ ನಡೆಯಿತು. ನಾರಾಯಣೀಯ ವಾಚನದ ನಂತರ ನಡೆದ ಸತ್ರ ಉಪನ್ಯಾಸದಲ್ಲಿ ಕುರುವಳ್ಳೂರು ಹರಿ ನಂಬೂದಿರಿ ಅವರಿಂದ ಗೋವರ್ಧನೋದ್ದರಣ, ಶ್ರೀಶುಕನ್ ಅವರಿಂದ ಗೋಪಿಯುಗಳ ಗೀತೆ, ವೆಲ್ಲಿನೇಜಿ ಹರಿಕೃಷ್ಣನ್ ಅವರಿಂದ ಅರಿμÁ್ಟಸುರವಧಂ ಮತ್ತು ಎನ್.ಎಸ್.ಜನಾರ್ದನನ್ ಪಿಳ್ಳೈ ಅವರಿಂದ ಸ್ವಮಂತಕೋಪಾಖ್ಯಾನಂ ಜರುಗಿತು. ದೀಪಾರಾಧನೆಯ ನಂತರ ಮಾಜಿ ಡಿಜಿಪಿ ಅಲೆಕ್ಸಾಂಡರ್ ಜೇಕಬ್ ಮತ್ತು ಮಾಜಿ ರಾಯಭಾರಿ ಟಿ.ಪಿ.ಶ್ರೀನಿವಾಸನ್ ಅವರಿಂದ ತತ್ವಪದ ಪ್ರವಚನಗಳೂ ನಡೆದವು.
ಪುಣ್ಯ ಭಾರತದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು; ಪುರಿ ಶಂಕರಾಚಾರ್ಯ
0
ಡಿಸೆಂಬರ್ 20, 2022
Tags