ಪತ್ತನಂತಿಟ್ಟ: ನಟ ಹಾಗೂ ಮೂಕಾಭಿನಯ ಕಲಾವಿದ ಉಲ್ಲಾಸ್ ಪಂದಳಂ ಅವರ ಪತ್ನಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪುಜಿಕ್ಕಾಡ್ ಮೂಲದ ಆಶಾ (38) ಮೃತರು. ಇಂದು ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆಶಾ ಮನೆಯ ಮೊದಲ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನೆ ವೇಳೆ ಉಲ್ಲಾಸ್ ಮನೆಯಲ್ಲಿದ್ದರು ಎಂದು ವರದಿಯಾಗಿದೆ. ಉಲ್ಲಾಸ್ ಪೆÇಲೀಸರಿಗೆ ಕರೆ ಮಾಡಿ ಪತ್ನಿ ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೆÇಲೀಸರು ಪಂದಳಂನಲ್ಲಿರುವ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಆಶಾ ಮನೆಯ ಮೇಲಿನ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪೆÇಲೀಸರ ಪ್ರಕಾರ, ಮನೆಯ ಮೇಲಿನ ಮಹಡಿಯಲ್ಲಿ ಪತ್ನಿ ಮತ್ತು ಮಕ್ಕಳು ಮಲಗಿದ್ದರು. ಕೆಲವು ದಿನಗಳ ಹಿಂದೆ ಉಲ್ಲಾಸ್ ಮತ್ತು ಅವರ ಕುಟುಂಬ ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು. ಪೆÇಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ನಟ ಉಲ್ಲಾಸ್ ಪಂದಳಂ ಅವರ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
0
ಡಿಸೆಂಬರ್ 20, 2022