ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಲ್ವರ್ ಲೈನ್ ಯೋಜನೆಯನ್ನು ಕೈಬಿಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಪುನರುಚ್ಚರಿಸಿದ್ದಾರೆ. ಯೋಜನೆ ಸ್ಥಗಿತಗೊಂಡಿದೆ ಎಂಬುದು ಸುಳ್ಳು ಎಂದು ತಿಳಿಸಿರುವರು.
ಕೇರಳದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಈ ಯೋಜನೆಯು ಪ್ರಮುಖ ಪ್ರಗತಿಯನ್ನು ಕಲ್ಪಿಸಲಾಗಿದೆ ಮತ್ತು ಆರ್ಥಿಕತೆ, ಕೈಗಾರಿಕಾ ಪರಿಸರ ಮತ್ತು ಸಾಮಾಜಿಕ ಬೆಳವಣಿಗೆಗೆ ಅದರ ಕೊಡುಗೆ ಚಿಕ್ಕದಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದ ಅಭಿವೃದ್ಧಿಯ ವಿರುದ್ಧದ ಆಂದೋಲನಕ್ಕೆ ಸರ್ಕಾರ ಮಣಿಯುವುದಿಲ್ಲ ಎಂದ ಮುಖ್ಯಮಂತ್ರಿಗಳು ಸಿಲ್ವರ್ ಲೈನ್ ಯೋಜನೆಯನ್ನು ಕೈಬಿಟ್ಟಿಲ್ಲ ಎಂದು ಪ್ರತಿಪಾದಿಸಿದರು. ಯೋಜನೆಯ ಡಿಪಿಆರ್ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದು ರೈಲ್ವೆ ಸಚಿವಾಲಯದ ಪರಿಗಣನೆಯಲ್ಲಿದೆ ಮತ್ತು ಯೋಜನೆಗೆ ತಾತ್ವಿಕವಾಗಿ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಾಮಾಜಿಕ ಪರಿಣಾಮದ ಅಧ್ಯಯನದ ಭಾಗವಾಗಿ ಗಡಿ ಗುರುತಿಸುವ ಚಟುವಟಿಕೆಗಳನ್ನು ನಡೆಸಲಾಯಿತು. ಇದು ಭೂಸ್ವಾಧೀನ ಚಟುವಟಿಕೆಯಲ್ಲ. ಭೂಮಿ ಸ್ವಾಧೀನಪಡಿಸಿಕೊಳ್ಳುವ ಮುನ್ನವೇ ಭೂಮಾಲೀಕರಿಗೆ ಪರಿಹಾರ ವಿತರಿಸುವುದಾಗಿ ಸರ್ಕಾರ ಹಲವು ಬಾರಿ ಹೇಳಿಕೆ ನೀಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಇದೇ ವೇಳೆ, ಎμÉ್ಟೀ ಅನುಮತಿ ನೀಡಿದರೂ ಸಿಲ್ವರ್ ಲೈನ್ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಪಕ್ಷಗಳು ತಿರುಗೇಟು ನೀಡಿವೆ. ತುರ್ತು ಪ್ರಸ್ತಾವನೆಗೆ ಅನುಮತಿ ನಿರಾಕರಣೆ ಖಂಡಿಸಿ ಪ್ರತಿಪಕ್ಷಗಳು ಸದನದಿಂದ ಹೊರ ನಡೆದವು.
ಸಿಎಂ ಕೆ ರೈಲ್ ಕೈಬಿಡುವುದಿಲ್ಲ; ಯೋಜನೆಯನ್ನು ತಾತ್ವಿಕವಾಗಿ ಅನುಮೋದಿಸಲಾಗಿದೆ: ಪಿಣರಾಯಿ ವಿಜಯನ್
0
ಡಿಸೆಂಬರ್ 08, 2022
Tags