ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ 41ನೇ ವಾರ್ಷಿಕೋತ್ಸವ ಹಾಗೂ ತಿರುವಿಳಕ್ ಮಹೋತ್ಸವದ ಭಾಗವಾಗಿ ನಿನ್ನೆ (ಶುಕ್ರವಾರ) ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿತು.
ಮಾನ್ಯ ಹಾಗೂ ಚುಕ್ಕಿನಡ್ಕ ಮಂದಿರದ ಗುರುಸ್ವಾಮಿಗಳಾದ ಕುಂಞಪ್ಪು ನಾಯ್ಕ ಹಾಗೂ ಕುಂಞಕಣ್ಣ ಮಣಿಯಾಣಿ ದೀಪ ಪ್ರಜ್ವಲನೆ ಗೈಯುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಗೌರವಾಧ್ಯಕ್ಷ ಮಾನ ಮಾಸ್ತರ್ ವಹಿಸಿದ್ದರು. ವೇದಿಕೆಯಲ್ಲಿ ಮಾನ್ಯ ಶಾಲಾ ಮುಖ್ಯೋಪಾಧ್ಯಾಯ ಸುರೇಂದ್ರನ್ ಎಂ ವಿ, ಚುಕ್ಕಿನಡ್ಕ ಮಂದಿರದ ಅಧ್ಯಕ್ಷ ಮಹೇಶ್ ವಳಕುಂಜ ಉಪಸ್ಥಿತರಿದ್ದರು. ಸೇವಾ ಸಮಿತಿ ಅಧ್ಯಕ್ಷ ಸಂತೋμï ಕುಮಾರ್ ಸ್ವಾಗತಿಸಿ, ಮಧುಚಂದ್ರ ಮಾನ್ಯ ವಂದಿಸಿದರು. ವಿದ್ಯಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಅನುμÁ ಟೀಚರ್ ಹಾಗೂ ಶಿಷ್ಯ ವೃಂದದವರಿಂದ ನೃತ್ಯ ವೈಭವ ಕಾರ್ಯಕ್ರಮ ನೆರವೇರಿತು. ರಾತ್ರಿ 7.30 ರಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ತಂಡದ ವತಿಯಿಂದ "ಗೀತಾ ಸಾಹಿತ್ಯ ಸಂಭ್ರಮ" ಜರಗಿತು. ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನೆರವೇರಿತು.
ಮಾನ್ಯ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವ: ವಾರ್ಷಿಕೋತ್ಸವ: ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ
0
ಡಿಸೆಂಬರ್ 31, 2022