ಪೆರ್ಲ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಕಾಸರಗೋಡು ಇದರ ಪೆರ್ಲ ವಲಯದ ಪೆರ್ಲ, ಕಜಂಪಾಡಿ, ಇಳಂತೋಡಿ, ವಾಣೀನಗರ, ಬೆದ್ರಂಪಳ್ಳ, ಧರ್ಮತ್ತಡ್ಕ ವಿಭಾಗಗಳ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪೆರ್ಲ ಶಂಕರ ಸದನದಲ್ಲಿ ಜರಗಿತು.
ಇದರ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಬಳಿಕ ನಡೆದ ಪದಗ್ರಹಣ ಕಾರ್ಯಕ್ರಮವನ್ನು ವೇದಮೂರ್ತಿ ಚಂದ್ರಶೇಖರ ನಾವಡ ಬಜಕೂಡ್ಲು ಉದ್ಘಾಟಿಸಿದರು. ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷೆ ಸ್ವರ್ಣಲತಾ ಅಧ್ಯಕ್ಷತೆ ವಹಿಸಿದ್ದರು. ಧ,ಗ್ರಾ,ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮುಖ್ಯ ಭಾಷಣಗೈದರು. ಎಣ್ಮಕಜೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಆಯಿμÁ ಎ.ಎ, ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಆಶ್ವಥ್ ಪೂಜಾರಿ ಲಾಲ್ ಭಾಗ್, ಜಿ.ಪಂ.ಸದಸ್ಯೆ ಶೈಲಜಾ ಭಟ್, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಶಂಕರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ್ ಭಟ್, ರಮೇಶ್ ಕುರೆಡ್ಕ, ಟಿ.ಪ್ರಸಾದ್, ಜನ ಜಾಗೃತಿ ಪಂ.ಸಮಿತಿ ಅಧ್ಯಕ್ಷ ಬಿ.ಪಿ.ಶೇಣಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಸಂಘದ ಸದಸ್ಯೆ ಯುವ ಕವಯತ್ರಿ ಸುಜಯ ಎಸ್ ಸಜಂಗದ್ದೆ ಅವರ ‘ಹೊಸ ಚಿಗುರು’ ಕವನ ಸಂಕಲನವನ್ನು ದ.ಕ.ಜಿಲ್ಲಾ ಕ.ಸಾ.ಪ.ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಬಿಡುಗಡೆಗೊಳಿಸಿದರು. ಸುನಂದ ಒಕ್ಕೂಟದ ವರದಿ ಮಂಡಿಸಿದರು. ಧ.ಗ್ರಾ.ಯೋಜನಾಧಿಕಾರಿ ಮುಖೇಶ್ ಗಟ್ಟಿ ಸ್ವಾಗತಿಸಿ ಮೇಲ್ವಿಚಾರಕ ಶಿವಪ್ರಸಾದ್ ವಂದಿಸಿ ನಿರೂಪಣೆಗೈದರು. ವಲಯದ ಸೇವಾ ಪ್ರತಿನಿಧಿಗಳು, ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.ಈ ಸಂದರ್ಭದಲ್ಲಿ ಸಂಘದ ಸದಸ್ಯರಿಂದ ಭಜನೆ, ಕುಣಿತ ಭಜನೆ ಹಾಗೂ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮ ಜರಗಿತು.