ಬದಿಯಡ್ಕ: ಎಡನೀರು ಸಮೀಪದ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಜೀರ್ಣೋದ್ಧಾರಕ್ಕೆ ಸಂಬಂದಿಸಿದ ಮಾತೃ ಸಮಿತಿಯ ರೂಪೀಕರಣ ಸಭೆ ಇತ್ತೀಚೆಗೆ ಕ್ಷೇತ್ರ ಪರಿಸರದಲ್ಲಿ ಜರಗಿತು. ನವೀನಕುಮಾರ ಭಟ್ ಕುಂಜರಕಾನ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ನಿರ್ಮಾಣದ ಮುಂದಿನ ಹಂತಗಳ ಬಗ್ಗೆ ಹಾಗೂ ಐತಿಹ್ಯದ ಕುರಿತು ವಿವರಣೆ ನೀಡಿದರು. ರಾಜನ್ ಮುಳಿಯಾರು, ಶಾರದಾ ಟೀಚರ್, ಶಾಂತಾ ಟೀಚರ್ ವೊರ್ಕೂಡ್ಲು, ಸರಿತಾ ಪಾಲೆಕ್ಕಾಲ್, ಕಿರಣ ಕೆಮ್ಮಂಗಯ ಮೊದಲಾದವರು ಸಭೆಯಲ್ಲಿ ಮಾತನಾಡಿದರು. ವಾಸುದೇವ ಭಟ್ ಚೂರಿಮೂಲೆ ಉಪಸ್ಥಿತರಿದ್ದರು. ಈಶ್ವರ ಭಟ್ ಸ್ವಾಗತಿಸಿ, ಪ್ರಶಾಂತ್ ಕಲ್ಲುಗದ್ದೆ ವಂದಿಸಿದರು. ಕೆ.ಎಂ.ಶರ್ಮ ಎಡನೀರು ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಮಾತೃ ಸಮಿತಿ ರಚಿಲಾಯಿತು. ಅಧ್ಯಕ್ಷೆಯಾಗಿ ಶಾರದಾ ಟೀಚರ್, ಪ್ರಧಾನ ಕಾರ್ಯದರ್ಶಿಯಾಗಿ ಸರಿತಾ ಕೆ.ಕೆ.ಪಾಲೇಕಾಲ್, ಖಜಾಂಜಿಯಾಗಿ ಕಿರಣ ಜಗದೀಶ್ ಕೆಮ್ಮಂಗಯ ಅವರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಶಾಂತಾ ಕುಮಾರಿ ಟೀಚರ್ ವರ್ಕೂಡ್ಲು, ಸರೋಜಿನಿ ಚಾಪಾಡಿ, ಮಿನಿ ಕೊಲಾಚಿಯಡ್ಕ, ಗಂಗಮ್ಮ ಚಾಪಾಡಿ, ಅಹಲ್ಯಾ.ಕೆ.ವಿ.ಬೇವಿಂಜ, ರಾಧಾ ಕಪ್ಪಣೆ, ಸರಸ್ವತಿ ಟೀಚರ್ ಎಡನೀರು, ಜೊತೆ ಕಾರ್ಯದರ್ಶಿಗಳಾಗಿ ಅನಿತಾ ಸಿ.ಹೆಚ್., ರೇಖಾ ಕೂರ್ಕಪಾಡಿ, ಮಂಜುಳಾ ಕೆ.ಕೆ.ಪುರಂ, ಪೂರ್ಣಿಮಾ, ಪ್ರಭಾವತಿ ಕೊಲಾಚಿಯಡ್ಕ, ಜಯಲಕ್ಷ್ಮಿ ಕೆಮ್ಮಂಗಯ, ಶಾಂತಿ.ಕಪ್ಪಣ ಮತ್ತು ಸಮಿತಿಯ ಸದಸ್ಯರನ್ನು ಆಯ್ಕೆಮಾಡಲಾಯಿತು.
ಮೋಪಾಲ ಸನ್ನಿಧಿ ಜೀರ್ಣೋದ್ದಾರ: ಮಹಿಳಾ ಸಮಿತಿ ರೂಪೀಕರಣ
0
ಡಿಸೆಂಬರ್ 06, 2022