HEALTH TIPS

ಬಾಕಿಲಪದವು ಸೇತುವೆ ನಿರ್ಮಾಣಕ್ಕೆ ಅಭಿವೃದ್ಧಿ ವಿರೋಧಿಗಳಿಂದ ಅಡ್ಡಿ ಎಣ್ಮಕಜೆ ಪಂ..ಅಧ್ಯಕ್ಷರು ಸ್ಥಳಕ್ಕೆ ಭೇಟಿಯಿತ್ತು ಸಮಸ್ಯೆ ಇತ್ಯರ್ಥಕ್ಕೆ ಸೂಚನೆ


            ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಗಡಿ ಗ್ರಾಮವಾದ ಬಾಕಿಪದವಿನಲ್ಲಿ  ಪರಿಸರ ಜನತೆಯ ಬಹು ನಿರೀಕ್ಷಿತ ಸೇತುವೆ ನಿರ್ಮಾಣಕ್ಕೆ ಅಭಿವೃದ್ಧಿ ವಿರೋಧಿ ಬಾಹ್ಯ ವ್ಯಕ್ತಿಗಳು ಅಡ್ಡಿಯಾಗಿದ್ದು ಸ್ಥಳದಲ್ಲಿ ನಡೆಯುವ ಕಾಮಗಾರಿ ಸ್ಥಗಿತಗೊಂಡಿದೆ.
        ಸುಮಾರು  ಎಂಟೂವರೆ ಕೋಟಿ ರೂ. ಅನುದಾನದಲ್ಲಿ ನಿರ್ಮಾಣವಾಗುತ್ತಿರುವ  ಸೇತುವೆ ಕಾಮಗಾರಿ  ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿರುವ ವಿಚಾರ ಪ್ರದೇಶದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದ್ದು ಈ ಪರಿಸರದ ಜನತೆಗೆ ಅತೀ ಉಪಯೋಗಪ್ರದವಾಗುವ  ಯೋಜನೆಯನ್ನು ಬುಡಮೇಲುಗೊಳಿಸುವ ರಾಜಕೀಯ ಪಕ್ಷವೊಂದಕ್ಕೆ ಸೇರಿದ ಬಾಹ್ಯ ವ್ಯಕ್ತಿಗಳು ಈ ಕೆಲಸ ಸ್ಥಗಿತಕ್ಕೆ ಕಾರಣರಾಗಿರುವುದು ಅ ಪಕ್ಷದ ಅಭಿವೃದ್ಧಿ ವಿರೋಧಿ ನೀತಿಯ ಬಗ್ಗೆ ಜನಪರ ಧ್ವನಿ ಮೂಡಿ ಬಂದಿದೆ. ಸ್ಥಗಿತಗೊಂಡ ಕಾಮಗಾರಿಯ ಬಗ್ಗೆ ಅರಿತ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿ ಈ ಬಗೆಗಿನ ಸತ್ಯಾಸತ್ಯತೆಯನ್ನು ಇಲಾಖೆಗೆ ಮನದಟ್ಟಾಗಿಸಿದ್ದಾರೆ.



        ಯೋಜನೆಯ ಸಾಕ್ಷಾತ್ಕಾರಕ್ಕಾಗಿ ಸ್ಥಳ ಬಿಟ್ಟು ಕೊಟ್ಟವರನ್ನು ನೇರವಾಗಿ ಭೇಟಿಯಾಗಿ ಅವರ ಅಹವಾಲನ್ನು ಕೇಳಿದಾಗ ಅವರಿಗೆ ಈ ವಿಚಾರದಲ್ಲಿ ಯಾವುದೇ ತಕರಾರಿಲ್ಲ ಮಾತ್ರವಲ್ಲದೆ  ಯೋಜನೆ ಸ್ಥಗಿತಗೊಳಿಸುವಲ್ಲಿ ಇವರ  ಯಾವುದೇ ಪಾತ್ರವಿಲ್ಲವೆಂದು ತಿಳಿದು ಬಂದಿದೆ.  ಈ ನಡುವೆ ಕಾಮಗಾರಿ ನಡೆಯುವ ಜಾಗದಲ್ಲಿ ಸ್ಥಳವೋ,ಆಸ್ತಿಯೋ ಇಲ್ಲದ ಕೆಲವು ರಾಜಕೀಯ ಪುಡಾರಿಗಳು, ಭೂ ಮಾಫಿಯದ ವ್ಯಕ್ತಿಗಳು  ಬಂದು ಸ್ಥಳೀಯರಲ್ಲಿ ಯೋಜನೆಗೆ  ಜಾಗಬಿಟ್ಟು ಕೊಡಬೇಡಿ, ಕೊಟ್ಟರೆ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು  ಬೆದರಿಸಿದ್ದು  ಸ್ಥಳೀಯರಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಈ   ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಯೊಂದಿಗೆ ಪಂ.ಅಧ್ಯಕ್ಷರು ಸಂಪರ್ಕಿಸಿ ಕಾಮಗಾರಿ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಸಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ನಾಡಿಗೂ ಜನರಿಗೂ ಪ್ರಯೋಜನಕಾರಿಯಾದ ಜನಪರ ಯೋಜನೆಗೆ  ರಾಜಕೀಯ ಲಾಭಕ್ಕಾಗಿ ಜವಾಬ್ದಾರಿಯುತ ವ್ಯಕ್ತಿಗಳೇ ಅಡ್ಡಗಾಲು ಇಡುವುದು ಖೇದಕರವಾಗಿದ್ದು ಇಂತಹ ಅಭಿವೃದ್ಧಿ ವಿರೋಧಿ ಬಾಹ್ಯ ಶಕ್ತಿಗಳ ವಿರುದ್ಧ ಜನಪರ ಹೋರಾಟಕ್ಕೆ ಇಳಿಯಲು ಸ್ಥಳೀಯರು ನಿರ್ಧರಿಸಿರುವುದಾಗಿ  ತಿಳಿದು ಬಂದಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries