ನವದೆಹಲಿ: ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಠ್ಯದಲ್ಲಿ 'ಆಹಾರ ಪೋಲು ತಡೆ' ಕುರಿತ ಪಾಠವನ್ನು ಅಳವಡಿಸಲು ಎಲ್ಲ ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು, 'ಸರ್ಕಾರ, ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಆಹಾರ ಪೋಲಿನ ವಿರುದ್ಧ ಅಭಿಯಾನ ಆರಂಭಿಸಿ ಅರಿವು ಮೂಡಿಸುತ್ತಿದೆ' ಎಂದು ತಿಳಿಸಿದರು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಹ (ಎಫ್‌ಎಸ್‌ಎಸ್‌ಎಐ) 'ಆಹಾರ ಉಳಿಸಿ, ಆಹಾರ ಹಂಚಿ' ಎಂಬ ಸಾಮಾಜಿಕ ಅಭಿಯಾನ ಆರಂಭಿಸಿದೆ ಎಂದು ಹೇಳಿದರು.