ಕಾಸರಗೋಡು: ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಿದ ಆರ್ಥಿಕವಾಗಿ ಹಿಂದುಳಿದ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗಗಳ ಇಲಾಖೆಯು ಅವಕಾಶ ಕಲ್ಪಿಸಿದೆ. ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಕೋರ್ಸ್‍ಗಳಿಗೆ ವಿದ್ಯಾರ್ಥಿವೇತನ ಲಭ್ಯವಿದ್ದು, ಭಾರತದಲ್ಲಿ ಲಭ್ಯವಿಲ್ಲದ ಕೋರ್ಸ್ ನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಬಹುದಾಗಿದೆ. ವಿದ್ಯಾರ್ಥಿಗಳಿಗೆ ಶೇ. 55 ಅಂಕಗಳನ್ನು ಪಡೆದಿರಬೇಖು. ಆಯ್ಕೆಯಾದ ಸಂಸ್ಥೆ, ವಿಶ್ವವಿದ್ಯಾಲಯದ ನೀಡಿದ ಶ್ರೇಯಾಂಕದಲ್ಲಿ 500 ರೊಳಗೆ ಇರಬೇಕು. ಪ್ರತಿ ವಿದ್ಯಾರ್ಥಿಗೆ ಗರಿಷ್ಠ 25 ಲಕ್ಷ ರೂಪಾಯಿ ತನಕ ವಿದ್ಯಾರ್ಥಿ ವೇತನ ಲಭಿಸುವುದು. ಆರ್ಥಿಕ ಕೊರತೆಯಿಂದ ವಿದೇಶ ವ್ಯಾಸಂಗದ ಕನಸು ಮೊಟಕು ಗೊಳ್ಳಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ವಿಧ್ಯಾಭ್ಯಾಸಕ್ಕಾಗಿ ಧನಸಹಾಯ ಒದಗಿಸುತ್ತಿದೆ.
ಈ ಮೂಲಕ ಭಾರತದಲ್ಲಿ ಪ್ರಚಾರದಲ್ಲಿಲ್ಲದ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಹೊಂದಿರುವ ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶ ನೀಡಲಾಗುವುದು. 2017ರಿಂದ ಈ ಯೋಜನೆ ಜಾರಿಯಲ್ಲಿದ್ದರೂ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ತೀರಾ ವಿರಳ. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವವರು ಕೇರಳದಲ್ಲಿ ವಾಸಿಸುವ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಪರಿಶಿಷ್ಟ ಜಾತಿ ಯಾ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರಬೇಕು. ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 55 ಶೇಕಡಾ ಅಂಕಗಳನ್ನು ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿದ್ದರೆ 50 ಶೇಕಡಾ ಅಂಕಗಳನ್ನು ಪಡೆದಿರಬೇಕು.
ಒಬ್ಬ ವಿದ್ಯಾರ್ಥಿಗೆ ಒಂದು ಕೋರ್ಸ್‍ಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುವುದು. 12 ಲಕ್ಷ ರೂಪಾಯಿ ವರೆಗೆ ಕುಟುಂಬದ ವಾರ್ಷಿಕ ಆದಾಯ ವಿರುವ ವಿದ್ಯಾರ್ಥಿಗಳಿಗೆ ವಸತಿ, ಜೀವನ ವೆಚ್ಚಗಳು ಮತ್ತು ವಿಮಾನ ಪ್ರಯಾಣದ ವೆಚ್ಚಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಪ್ರಮಾಣೀಕರಿಸಿದ ಎಲ್ಲಾ ವೆಚ್ಚಗಳನ್ನು ಪೂರೈಸಲು ಪೂರ್ಣ ಪ್ರಮಾಣದ ವಿದ್ಯಾರ್ಥಿವೇತನವು ಲಭಿಸಲಿದೆ. ಕುಟುಂಬದ ವಾರ್ಷಿಕ ಆದಾಯ 12 ಲಕ್ಷದಿಂದ 20 ಲಕ್ಷ ದವರೆಗೆ ಇರುವ ವಿದ್ಯಾರ್ಥಿಗಳು ಸಂಬಂಧ ಪಟ್ಟ ಅಧಿಕಾರಿಗಳು ಪ್ರಮಾಣೀಕರಿಸಿದ ಯಥಾರ್ಥ ಬೋಧನಾ ಶುಲ್ಕ, ವಿಸಾ ಶುಲ್ಕ, ಅನುಮತಿಸಿದ ವಿಮಾನ ದರ, ವೈದ್ಯಕೀಯ ವಿಮಾ ಪ್ರೀಮಿಯಂ, ವಸತಿ ಎಂಬಿವುಗಳು ಸೇರಿ 50 ಶೇಕಡಾ ವಿದ್ಯಾರ್ಥಿವೇತನ ಲಭಿಸುವುದು. ಕುಟುಂಬದ ವಾರ್ಷಿಕ ಆದಾಯ 20 ಲಕ್ಷ ರೂಪಾಯಿ ಗಿಂತ ಹೆಚ್ಚು ಇರುವ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳು ಪ್ರಮಾಣೀಕರಿಸಿದ ನಿಜವಾದ ಬೋಧನಾ ಶುಲ್ಕಕ್ಕೆ ಮಾತ್ರ ಅರ್ಹರಾಗಿರುತ್ತಾರೆ. ಎಸ್‍ಟಿ ಅಭ್ಯರ್ಥಿಗಳಿಗೆ ಆದಾಯ ಮಿತಿ ಅನ್ವಯಿಸುವುದಿಲ್ಲ.
ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿಗೆ ಸಮಾನವಾದ ಸ್ನಾತಕೋತ್ತರ ಡಿಪೆÇ್ಲಮಾ, ಎಂ. ಫಿಲ್ ಮತ್ತು ತತ್ಸಮಾನ, ಪಿಎಚ್‍ಡಿ ಮತ್ತು ಪೆÇೀಸ್ಟ್ ಡಾಕ್ಟರಲ್ ಪೆÇ್ರೀಗ್ರಾಮ್ ಎಂಬಿವುಗಳು ಯೋಜನೆಯಲ್ಲಿ ಒಳಗೊಂಡಿವೆ. ವಿದ್ಯಾರ್ಥಿಗಳು ಪ್ರವೇಶ ಪತ್ರ, ವಾರ್ಷಿಕ ಬೋಧನಾ ಶುಲ್ಕ, ಆಹಾರ ಮತ್ತು ವಸತಿ ವೆಚ್ಚಗಳನ್ನು ಸೂಚಿಸುವ ಅಧಿಕೃತ ದಾಖಲೆಯನ್ನು ಸಂಬಂಧಪಟ್ಟ ಸಂಸ್ಥೆಯಿಂದ ಪಡೆಯಬೇಕು. ಇವುಗಳು ಲಭಿಸಿದ ಎರಡು ವಾರಗಳೊಳಗೆ ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ನಿರ್ದೇಶಕರು ಪರಿಶೀಲಿಸಿ ಹತ್ತು ದಿನಗಳೊಳಗೆ ವಿದ್ಯಾರ್ಥಿವೇತನದ ತಾತ್ಕಾಲಿಕ ಮಂಜೂರಾತಿಯ ಕುರಿತು ವಿದ್ಯಾರ್ಥಿಗೆ ತಿಳಿಸಲಾಗುತ್ತದೆ.
ವಿದ್ಯಾರ್ಥಿ ವೇತನದ ಮೊದಲ ಕಂತನ್ನು ಎರಡನೇ ಹಂತದಲ್ಲಿ ವಿತರಿಸಲಾಗುವುದು. ಇದು ಒನ್ ವೇ ಇಕಾನಮಿ ಕ್ಲಾಸ್ ವಿಮಾನ ದರ, ವಿಸಾ ಶುಲ್ಕ ಮತ್ತು ಮೊದಲ ವರ್ಷಕ್ಕಿರುವ ಬೋಧನಾ ಶುಲ್ಕವನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ವಿದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿ… ಮತ್ತು ನೋರ್ಕಾ ರೂಟ್ಸ್‍ನ ಸೂಚನೆಗಳನ್ನು ಅನುಸರಿಸಬೇಕು. ವಿದೇಶ ಅಧ್ಯಯನ ಧನಸಹಾಯದ ಜೊತೆಗೆ ವಿದೇಶ ಉದ್ಯೋಗಕ್ಕಾಗಿಯೂ ಇಲಾಖೆಯು ಹಣಕಾಸಿನ ನೆರವು ನೀಡುತ್ತದೆ. ವಿದೇಶ ವಿಧ್ಯಾಭ್ಯಾಸದ ಕುರಿತು ಹೆಚ್ಚಿನ ಮಾಹಿತಿಗಾಗಿ 04712737308 ಎಂಬ ದೂರವಾಣಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿದೇಶ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಇಲಾಖೆ
0
ಡಿಸೆಂಬರ್ 09, 2022