ಕುಂಬಳೆ: ನೆಹರೂ ಯುವಕೇಂದ್ರ ಸುರಕ್ಷಾ ಪ್ರೊಜೆಕ್ಟ್ ಕಾಸರಗೋಡು, ಜಿ.ಎಚ್.ಎಸ್.ಎಸ್ ಕುಂಬಳೆ ಎನ್ ಎಸ್ ಎಸ್ ಘಟಕ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕುಂಬಳೆ ಇದರ ಸಂಯುಕ್ತಾಶ್ರಯದಲ್ಲಿ ಕುಂಬಳೆ ಜಿ ಯಚ್ ಎಸ್ ಶಾಲೆಯಲ್ಲಿ ಏಡ್ಸ್ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪ್ರಾಂಶುಪಾಲ ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಸುರಕ್ಷಾ ಪ್ರೊಜೆಕ್ಟ್ ಕಾರ್ಯಕರ್ತ ನಾರಾಯಣ ಪಿ ಪೆರಡಾಲ ಏಡ್ಸ್ ದಿನದ ಸಂದೇಶದ ಜತೆಗೆ ಏಡ್ಸ್ ರೋಗದ ಬಗ್ಗೆ ವಿವರಿಸಿದರು.
ಸುರಕ್ಷಾ ಪ್ರ್ರೊಜೆಕ್ಟ್ ಕೌನ್ಸಿಲರ್ ಪೂಜಾ ಅವರು ಏಡ್ಸ್‍ದಿನ ಪ್ರತಿಜ್ಞೆ ಬೋಧಿಸಿದರು. ಸುರಕ್ಷಾ ಪ್ರೊಜೆಕ್ಟ್ ಲೆಕ್ಕಪರಿಶೋಧಕ ಸಂಧ್ಯಾ ಎ.ಕೆ., ಎನ್.ಎಸ್.ಎಸ್ ಯೋಜನಾಧಿಕಾರಿ ಸುಮೇಶ್, ಕಾರ್ತಿಕೇಯನ್, ಸವಾದ್, ಮಹಾಬಲ ನಾಯಕ್ ಮಾತನಾಡಿದು.
ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಬಾಲಚಂದ್ರನ್ ರ್ಯಾಲಿಗೆ ನೀಲಿ ನಕಾಶೆ ಪ್ರದರ್ಶಿಸಿದರು. ಲೆಕ್ಕಪರಿಶೋಧಕಿ ಸಂಧ್ಯಾ ಫಿದಾ ಫಾತಿಮಳಿಗೆ ರೆಡ್ ರಿಬ್ಬನ್ ತೊಡಿಸಿದರು. ನಂತರ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಸುರಕ್ಷಾ ಪೆÇ್ರಜೆಕ್ಟ್ ಕಾರ್ಯಕರ್ತೆ ಸನೀಷ ಸ್ವಾಗತಿಸಿ, ಎನ್ ಎಸ್ ಎಸ್ ನೇತರೆ ಫಿದಾ ಫಾತಿಮ ವಂದಿಸಿದರು.