ಕಾಸರಗೋಡು: ಮಂಜೇಶ್ವರ ಗುಡ್ಡೆಕೇರಿ ನಿವಾಸಿ, ಖ್ಯಾತ ಕಬಡ್ಡಿ ಪಟು, ಕೇರಳ ರಾಜ್ಯ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುಧೀರ್ ಕುಮಾರ್(58)ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಎಳವೆಯಿಂದಲೇ ಕಬಡ್ಡಿಯಲ್ಲಿ ಉತ್ತಮ ಸಾಧನೆ ತೋರಿದ್ದ ಇವರು, ತಿಲಕ್ ಮಂಜೇಶ್ವರ, ವೀರಮಾರುತಿ ಹೊಸಂಗಡಿ, ವೀರಹನುಮಾನ್ ಕಾಸರಗೊಡು ಸೇರಿದಂತೆ ವಿವಿಧ ಕಬಡ್ಡಿ ತಂಡಗಳಿಗಾಗಿ ಹಾಗೂ ಕೇರಳ, ಕರ್ನಾಟಕದ ವಿವಿಧೆಡೆ ಆಟವಾಡಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಬಡ್ಡಿ ಪಟು ಸುಧೀರ್ ಕುಮಾರ್ ನಿಧನ
0
ಡಿಸೆಂಬರ್ 16, 2022