ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಥಮ ರಂಗಪ್ರವೇಶ ಮತ್ತು ಶ್ರೀಕೃಷ್ಣ ವಿಜಯ ಯಕ್ಷಗಾನ ಬಯಲಾಟ ನಡೆಯಿತು.
ಗಡಿ ಸಂಸ್ಕøತಿ ಉತ್ಸವ ಹಾಗೂ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಈ ಕಲಾ ಕಾರ್ಯಕ್ರಮವು ನಾಟ್ಯಗುರು ಸರೋಜಿನಿ ವಿಷ್ಣುಶರಣ ಅವರ ನಿರ್ದೇಶನದಲ್ಲಿ ಪ್ರಸ್ತುತಗೊಂಡಿತು. ಮೊದಲಿಗೆ ಕು.ಸಾಯಿ ನಕ್ಷತ್ರ ಸುಳ್ಯ ಅವರ ಭಾಗವತಿಕೆಯಲ್ಲಿ ಕು.ಸಂಜನಾ ಹಾಗೂ ಕು.ಸಾನ್ನಿಧ್ಯ ರೆಂಜಾಳ ಅವರು ಯಕ್ಷಗಾನ ಬಾಲಗೋಪಾಲರ ನೃತಾಭಿನಯದಲ್ಲಿ ಕಾಣಿಸಿಕೊಂಡರು.
ಯಕ್ಷಗಾನ ದೇವ ಸಭೆ - ದೇವೇಂದ್ರನ ಒಡ್ಡೋಲಗ ದೃಶ್ಯದಲ್ಲಿ ಕು.ಅಭಿಜ್ಞಾ ಭಟ್ ನಾಟಿಕೇರಿ ಭಾಗವತಿಕೆಯಲ್ಲಿ, ದೇವೇಂದ್ರ – ಕು. ಭಾಸ್ಮಿತಾ ಬೆಳ್ಳಿಪ್ಪಾಡಿ, ಅಗ್ನಿ – ಕು.ತಶ್ಮಿ ಬೆಳ್ಳಿಪ್ಪಾಡಿ, ವರುಣ – ಕು. ಧೃತಿ ದೇಲಂಪಾಡಿ, ವಾಯು – ಕು. ಶ್ರಾವ್ಯ ಚೆಂಡೆಮೂಲೆ, ಕುಬೇರ – ಮಾ| ನೂತನ್ ಕೊಂಬೆಟ್ಟು, ನಿರುತಿ – ಕು.ಅಭಿಜ್ಞ ಈಶ್ವರಮಂಗಲ, ಈಶಾನ – ಕು. ಅತಿಥಿ ಕೇದಗಡಿ, ಯಮ – ಮಾ| ತೇಜಸ್ ಮಯ್ಯಾಳ ಅವರು ಭಾಗವಹಿಸಿದರು.
ಶಿವಪಂಚಾಕ್ಷರಿ ಪ್ರಸಂಗದ ಈಶ್ವರ ಮತ್ತು ವೀರ ಭದ್ರಾದಿ ಬಲಗಳು ದೃಶ್ಯದಲ್ಲಿ ಅಭಿಜ್ಞಾ ಭಟ್ ನಾಟಿಕೇರಿ ಅವರ ಭಾಗವತಿಕೆಯಲ್ಲಿ, ಈಶ್ವರ – ಕು. ರಚಿತಾ ಡಿ.ಆರ್ ದೇಲಂಪಾಡಿ, ವೀರಭದ್ರ – ಮಾ. ಅಭಿನವ್ ಈಶ್ವರಮಂಗಲ, ಕಾಲಭೈರವ – ಕು. ಕಾವ್ಯ ಶ್ರೀ, ಶೃಂಗಿ – ಮಾ. ಹಿತೇಶ್ ಮಯ್ಯಾಳ , ಭೃಂಗಿ – ಕು. ವಾಗ್ಮೀಶ ಬಾಳೆಕೋಡಿ, ಭೃಕುಟಿ – ಕು. ಪ್ರತಿಮ ಕಲ್ಲಡ್ಕ, ಗಣಪತಿ – ಮಾ| ಯಶ್ ಕಲ್ಲಡ್ಕ, ಷಣ್ಮುಖ – ಕು. ರಕ್ಷಾ ಬಂದ್ಯಡ್ಕ ದೇಲಂಪಾಡಿ ಅವರು ವೇಷಗಾರಿಕೆಯಲ್ಲಿ ಕಾಣಿಸಿಕೊಂಡರು.
ಶ್ರೀಕೃಷ್ಣ ಬಾಲಲೀಲೆಯ ಶಕಟಾಸುರ ವಧೆ ಕಥಾಭಾಗದಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ಎಂಕಣ್ಣಮೂಲೆ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ಜನಮನ ರಂಜಿಸಿದರು. ಶ್ರೀಕೃಷ್ಣ – ಕು. ಲಿಖಿತ ಬೆಳ್ಳಿಪ್ಪಾಡಿ, ವಿಜಯ – ಕು. ಕೀರ್ತಿ ಬೆಳ್ಳಿಪ್ಪಾಡಿ, ಬಲರಾಮ – ಕು. ಈಶ್ವರಿ ಪೃಥ್ವಿ ಬನಾರಿ, ಶಕಟಾಸುರ – ಮಾ. ಶ್ರೀನಿಧಿ ಮಯ್ಯಾಳ, ಧೇನುಕಾಸುರ – ಮಾ. ಹವ್ಯಾಸ್ ಬೆಳ್ಳಿಪ್ಪಾಡಿ, ವಾತಾಸುರ – ಕು. ರಕ್ಷಾ ಬೆಳ್ಳಿಪ್ಪಾಡಿ, ಪ್ರಲಂಬಾಸುರ – ಮಾ. ಆಶ್ಲೇμï ಬೆಳ್ಳಿಪ್ಪಾಡಿ, ಮಾಯಾಸುರ – ಕು. ಹಸ್ತಾ ಬೆಳ್ಳಿಪ್ಪಾಡಿ, ಬಕಾಸುರ – ಮಾ. ಅನ್ವಿತ್ ಗುಂಡ್ಯಡ್ಕ, ಸಿಂಹಾಸುರ – ಕು.ಜಾಹ್ನವಿ ಗುಂಡ್ಯಡ್ಕ, ಕೇಶಿ – ಕು. ಚೈತನ್ಯ ಗುಂಡ್ಯಡ್ಕ ಅವರು ಪಾತ್ರಪೆÇೀಷಣೆ ಗೈದರು.
ಬಳಿಕ ಕಂಸವಧೆ ಪ್ರಸಂಗದಲ್ಲಿ ಕು.ರಚನಾ ಚಿದ್ಗಲ್ ಭಾಗವತಿಕೆಯಲ್ಲಿ, ಶ್ರೀಕೃಷ್ಣ – ಕು. ಶ್ರೀಮಾ ಎಂ.ಬಿ ಸುಳ್ಯ, ಬಲರಾಮ – ಕು. ಹರ್ಷಿತ ಬೆಳ್ಳಿಪ್ಪಾಡಿ, ಗೋಪಿಕೆಯರಾಗಿ ಕು.ಸಂಜನಾ ರೆಂಜಾಳ, ಕು. ಸಾನ್ನಿಧ್ಯ ರೆಂಜಾಳ, ರಜಕ – ಕು.ಸುಶ್ಮಿತಾ ಮೋಹನ್ ಬೆಳ್ಳಿಪ್ಪಾಡಿ, ಕಂಸಾಸುರ – ಕು. ವೀಕ್ಷಿತ ಬಂದ್ಯಡ್ಕ, ಚಾಣೂರ – ಕು. ಭಾಸ್ಮಿತ ಬೆಳ್ಳಿಪ್ಪಾಡಿ, ಮುಷ್ಠಿಕ – ಕು. ಕೀರ್ತನ ಬೆಳ್ಳಿಪ್ಪಾಡಿ ಅವರು ವೇಷಗಾರಿಕೆಯಲ್ಲಿ ಕಾಣಿಸಿಕೊಂಡರು.
ಚೆಂಡೆ ಮದ್ದಳೆ ಚಕ್ರತಾಳದಲ್ಲಿ ಚಂದ್ರಶೇಖರ ಗುರುವಾಯನಕೆರೆ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ರಜತ್ ಡಿ.ಆರ್ ಅವರು ತಮ್ಮ ಕೈಚಳಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಸರೋಜಿನಿ ಬನಾರಿ ಅವರ ಪ್ರತಿಫಲಾಪೇಕ್ಷೆಯಿಲ್ಲದ ಸೇವೆಯನ್ನು ಗುರುತಿಸಿ ಯಕ್ಷಗಾನ ವಿದ್ಯಾರ್ಥಿಗಳ ಹೆತ್ತವರು ಅವರನ್ನು ಸನ್ಮಾನಿಸಿ ಗೌರವಿಸಿದರು. ಲತಾ ಆಚಾರ್ಯ ಬನಾರಿ ಕಾರ್ಯಕ್ರಮ ನಿರೂಪಣೆ ಗೈದರು.
ಯಕ್ಷಗಾನ ಪ್ರಥಮ ರಂಗಪ್ರವೇಶ ಮತ್ತು ಶ್ರೀಕೃಷ್ಣ ವಿಜಯ ಯಕ್ಷಗಾನ ಬಯಲಾಟ
0
ಡಿಸೆಂಬರ್ 28, 2022
Tags