ನೀವು ಗಮನಿಸಿರಬಹುದು ಚಳಿಗಾಲದಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ, ಅಲ್ಲದೆ ಈ ಅವಧಿಯಲ್ಲಿ ಮುಖದಲ್ಲಿ ಬ್ಲ್ಯಾಕ್ ಹೆಡ್ ಸಮಸ್ಯೆ ಕೂಡ ಹೆಚ್ಚುವುದು ಏಕೆ? ಈ ಬಗೆಯ ಸಮಸ್ಯೆ ತಡೆಗಟ್ಟುವುದು ಹೇಗೆ ಎಂದು ನೋಡೋಣ:
ಚಳಿಗಾಲದಲ್ಲಿ ತ್ವಚೆ ತುಂಬಾ ಡ್ರೈಯಾಗುವುದು
ಚಳಿಗಾಲದಲ್ಲಿ ತ್ವಚೆ ತುಂಬಾ ಡ್ರೈಯಾಗುತ್ತದೆ, ಅಲ್ಲದೆ ಈ ಸಮಯದಲ್ಲಿ ತ್ವಚೆಯಲ್ಲಿ
ಸೆಬಮ್ ಉತ್ಪತ್ತಿ ಹೆಚ್ಚಿರುತ್ತದೆ, ಇದರಿಂದ ಮುಖದಲ್ಲಿ ಮೊಡವೆ ಸಮಸ್ಯೆ ಹೆಚ್ಚುವುದು.
ಮುಖದ "T-zone" ಅಂದರೆ ಹಣೆ, ಮೂಗು, ಕೆನ್ನೆ ಭಾಗದಲ್ಲಿ ಈ ಸೆಬಮ್ ಅಧಿಕ ಉತ್ಪತ್ತಿಯಾಗುವುದರಿಂದ ಈ ಭಾಗದಲ್ಲಿ ಮೊಡವೆ ಹೆಚ್ಚಾಗಿ ಕಂಡು ಬರುತ್ತದೆ.
ಚಳಿಗಾಲದಲ್ಲಿ ಮುಖದಲ್ಲಿ ಇನ್‌ಫ್ಲೇಮೇಷನ್ ಹೆಚ್ಚುವುದು
ವಾತಾವರಣ ತಂಪಾಗಿ ಇರುವುದರಿಂದ ಮುಖ ಬೇಗನೆ ಡ್ರೈಯಾಗುತ್ತದೆ, ಇದರಿಂದ ಸೆಬಮ್ ಉತ್ಪತ್ತಿ
ಹೆಚ್ಚಿ ಮುಖದಲ್ಲಿ ಜಿಡ್ಡಿನಂಶ ಹೆಚ್ಚಾಗಿ ಮೊಡವೆ ಉಂಟಾಗುವುದು. ಅಲ್ಲದೆ ಉರಿಯೂತದ
ಸಮಸ್ಯೆ ಕೂಡ ಹೆಚ್ಚಾಗುವುದು.
ಚಳಿಗಾಲದಲ್ಲಿ ಮೊಡವೆ ಸಮಸ್ಯೆ ತಡೆಗಟ್ಟುವುದು ಹೇಗೆ?
* ನೀವು ಆಯಿಲ್ ಫ್ರೀ ಸ್ಕಿನ್ ಮಾಯಿಶ್ಚರೈಸರ್ ಬಳಸಬೇಕು.
* ನೀವು ಚಳಿಗಾಲದಲ್ಲಿ ನಿಮ್ಮ ತ್ವಚೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಸ್ಟಾಪ್‌ಮಾಡಬೇಡಿ.
* ಮುಖವನ್ನು ಆಗಾಗ ತೊಳೆಯಬೇಡಿ: ಇದರಿಂದ ಕೂಡ ಮುಖ ತುಂಬಾ ಡ್ರೈಯಾಗಿ ಮೊಡವೆ ಹೆಚ್ಚುವುದು.
ಇತರೆ ಸಲಹೆ
* ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ: ಚಳಿಗಾಲದಲ್ಲಿ ಮೈಗೆ ಬಿಸಿ ಬಿಸಿ ನೀರು
ಹಾಕಬೇಕೆನಿಸುವುದು, ಆದರೆ ಹದ ಬಿಸಿ ನೀರು ಮಾತ್ರ ಬಳಸಿ. ಮುಖ ತೊಳೆಯಲು ಮೈಲ್ಡ್
ಕ್ಲೆನ್ಸರ್ ಬಳಸಿ, ಸೋಪ್ ಬಳಸಬೇಡಿ.
* ಸ್ನಾನದ ಬಳಿಕ ಮಾಯಿಶ್ಚರೈಸರ್ ಹಚ್ಚಿ: ಮುಖ, ಕುತ್ತಿಗೆ, ಬೆನ್ನು ಹೀಗೆ ಯಾವ
ಭಾಗದಲ್ಲಿ ಹೆಚ್ಚಾಗಿ ಮೊಡವೆ ಕಂಡು ಬರುತ್ತದೋ ಆ ಭಾಗಕ್ಕೆ ಆಯಿಲ್ ಫ್ರೀ ಮಾಯಿಸ್ಚರೈಸರ್
ಹಚ್ಚಿಕೊಳ್ಳಿ.
* ಪ್ರತಿ ದಿನ ಎಕ್ಸ್‌ಫೋಲೆಟ್ ಮಾಡಿ: ಇದರಿಂದ ಡೆಡ್ ಸ್ಕಿನ್ ತೆಗೆಯಬಹುದು, ಮುಖದಲ್ಲಿ ಮೊಡವೆ ಸಮಸ್ಯೆ ಕಡಿಮೆಯಾಗುವುದು.
ಚಳಿಗಾಲದಲ್ಲಿ ಈ ಟಿಪ್ಸ್ ಪಾಲಿಸಿ, ಮೊಡವೆ ಕಡಿಮೆಯಾಗುವುದು.