HEALTH TIPS

ಕಾಸರಗೋಡು ಉದ್ಯಮ ಸ್ನೇಹಿ ಜಿಲ್ಲೆ: ಉದ್ಯಮ ಕ್ಷೇತ್ರದಲ್ಲಿ ಹತ್ತು ಪಟ್ಟು ಪ್ರಗತಿ


         ಕಾಸರಗೋಡು: ವರ್ಷಕ್ಕೆ ಒಂದು ಲಕ್ಷ ಉದ್ಯಮಗಳು ಯೋಜನೆಯ ಮೂಲಕ ಕಾಸರಗೋಡು ಉದ್ಯಮಿ ಸ್ನೇಹಿ ಜಿಲ್ಲೆಯಾಗುತ್ತಿದೆ. ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. 2021-22ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಹತ್ತು ಪಟ್ಟು ಹೆಚ್ಚು ಉದ್ದಿಮೆಗಳನ್ನು ಆರಂಭಿಸಲಾಗಿದೆ. ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಸಮಾನಾಂತರವಾಗಿ ಹೆಚ್ಚಿವೆ. 2021-22ನೇ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ 220 ಉದ್ದಿಮೆಗಳ ಬದಲಾಗಿ ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್‍ವರೆಗೆ 3175 ಉದ್ದಿಮೆಗಳನ್ನು ಆರಂಭಿಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 196.39 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 13.928 ಕೋಟಿಗಳನ್ನು ಹೂಡಿಕೆ ಮಾಡಲಾಗಿತ್ತು, ಇದು ಆರ್ಥಿಕ ವರ್ಷದ ಅಂತ್ಯದ ಮುಂಚೆಯೇ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಉದ್ದಿಮೆಗಳ ಆರಂಭದೊಂದಿಗೆ ಉದ್ಯೋಗಾವಕಾಶಗಳೂ ಹೆಚ್ಚಿದವು. ನವೆಂಬರ್ ತಿಂಗಳವರೆಗೆ ಉದ್ಯಮಗಳ ಮೂಲಕ 6460 ಜನರು ಉದ್ಯೋಗವನ್ನು ಪಡೆಯಲು ಸಾಧ್ಯವಾಯಿತು. 2021-22ರ ಆರ್ಥಿಕ ವರ್ಷದಲ್ಲಿ ಒಟ್ಟು ಉದ್ಯೋಗ 959 ಜನರಿಗೆ ಉದ್ಯೋಗ ಲಭಿಸಿದೆ.
             ಕ್ಷೇತ್ರಗಳ ಆಧಾರದ ಮೇಲೆ ಹೆಚ್ಚಿನ ಉಪಕ್ರಮಗಳು ಕಾಞಂಗಾಡು ಕ್ಷೇತ್ರದಲ್ಲಿವೆ. ಕಾಞಂಗಾಡ್ 729 ಉದ್ಯಮಗಳನ್ನು ಇಲ್ಲಿಯವರೆಗೆ ಪ್ರಾರಂಭಿಸಲಾಗಿದೆ. 82.51 ಕೋಟಿ ಹೂಡಿಕೆ ಮತ್ತು 1557 ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಇತರೆ ಕ್ಷೇತ್ರಗಳಲ್ಲಿಯೂ ಉದ್ಯಮಶೀಲತೆ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಜಿಲ್ಲೆಗೆ. ಮಂಜೇಶ್ವರದÀಲ್ಲಿ 558 ಉದ್ಯಮಗಳು ಪ್ರಾರಂಭವಾದವು. 23.2 ಕೋಟಿ ಬಂಡವಾಳದಲ್ಲಿ 1059 ಜನರಿಗೆ ಉದ್ಯೋಗ ಸಿಕ್ಕಿದೆ. ಕಾಸರಗೋಡು ಕ್ಷೇತ್ರದಲ್ಲಿ 592 ಉದ್ಯಮಗಳಲ್ಲಿ 34.83 ಕೋಟಿ ರೂ. 1274 ಉದ್ಯೋಗಾವಕಾಶಗಳು ಲಭಿಸಿದೆ. ಉದುಮ ಕ್ಷೇತ್ರದಲ್ಲಿ 632 ಉದ್ದಿಮೆಗಳು ಆರಂಭಗೊಂಡಿವೆ. 27.11 ಕೋಟಿ ಹೂಡಿಕೆ ಮತ್ತು 1272 ಉದ್ಯೋಗಾವಕಾಶಗಳು ಲಭಿಸಿದೆ. 664 ಉದ್ಯಮಗಳು ತ್ರಿಕರಿಪುರದಲ್ಲಿ ಪ್ರಾರಂಭವಾದವು. ಈ ಮೂಲಕ 28.74 ಕೋಟಿ ಹೂಡಿಕೆ ಹಾಗೂ 1272 ಉದ್ಯೋಗ ಸೃಷ್ಟಿಯಾಗಿದೆ.
                    ಉದ್ಯಮಿಗಳನ್ನು ಆಕರ್ಷಿಸಲು ಜಿಲ್ಲಾ ಕೈಗಾರಿಕಾ ಕೇಂದ್ರ:
          ಜಿಲ್ಲಾ ಕೈಗಾರಿಕಾ ಕೇಂದ್ರದ ನೇತೃತ್ವದಲ್ಲಿ ವರ್ಷಕ್ಕೆ ಒಂದು ಲಕ್ಷ ಉದ್ಯಮಗಳು ಯೋಜನೆ ಮೂಲಕ ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಆರಂಭಿಸಲು ವಿವಿಧ ಚಟುವಟಿಕೆಗಳನ್ನು ರೂಪಿಸಿ ಅನುμÁ್ಠನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಜಾಗೃತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವವರನ್ನು ಗುರಿಯಾಗಿಟ್ಟುಕೊಂಡು ಪಂಚಾಯಿತಿಗಳಿಂದ ಸಾಲ ಪರವಾನಗಿ ಸಹಾಯಧನ ಮೇಳವನ್ನು ನಡೆಸಲಾಯಿತು. ಮೇಳದಲ್ಲಿ ವಿವಿಧ ಇಲಾಖೆ, ಬ್ಯಾಂಕ್, ಸಹಕಾರಿ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡು ವಿವಿಧ ಸೇವೆಗಳನ್ನು ಒದಗಿಸಿದರು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಪಂಚಾಯತ್ ಮಟ್ಟದಲ್ಲಿ ಕೈಗಾರಿಕಾ ಉದ್ಯಮಗಳನ್ನು ಹೆಚ್ಚಿಸಲು ಇಂಟರ್ನಿಗಳನ್ನು ನೇಮಿಸಿದೆ. ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವವರಿಗೆ ಇಂಟರ್ನ್‍ಗಳು ಎಲ್ಲಾ ಬೆಂಬಲವನ್ನು ನೀಡುತ್ತಾರೆ. ಜಿಲ್ಲಾ ಕೈಗಾರಿಕೆ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್ ಮಾಹಿತಿ ನೀಡಿ, ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ವರೆಗೆ ಉದ್ಯಮಶೀಲತೆ ಕ್ಷೇತ್ರದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದ್ದು, ಹೊಸ ಉದ್ದಿಮೆಗಳಿಗೆ ಎಲ್ಲ ರೀತಿಯ ಬೆಂಬಲ, ಪೆÇ್ರೀತ್ಸಾಹ ನೀಡುವುದಾಗಿ ತಿಳಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries