ಕಾಸರಗೋಡು: ಬಸ್ಸಿನಲ್ಲಿ ಲಭಿಸಿದ ಎರಡೂವರೆ ಪವನಿನ ಚಿನ್ನದ ಬ್ರೇಸ್‍ಲೆಟನ್ನು ಕೆಎಸ್‍ಆರ್‍ಟಿಸಿ ನೌಕರರು ಅದರ ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಡಿ.22ರಂದು ಕಣ್ಣೂರಿನ ಮಾತಮಂಗಲಂ ನಿವಾಸಿ ಪಿ.ವಿ. ಜಿತಿನ್ ಅವರು ಮಂಗಳೂರಿನಿಂದ ಕಾಸರಗೋಡಿಗೆ ಕೆಎಸ್ಸಾರ್ಟಿಸಿ ಬಸ್ಸಲ್ಲಿ ತೆರಳುವ ಹಾದಿ ಮಧ್ಯೆ ಜಿತಿನ್ ಅವರ ಚಿನ್ನದ ಕೈ ಚೈನ್ ನಾಪತ್ತೆಯಾಗಿತ್ತು. ಕೆಎಸ್‍ಆರ್‍ಟಿಸಿ ಕಾಸರಗೋಡು ಡಿಪೆÇೀ ಬಸ್ ನಿರ್ವಾಹಕ ಪಯಾವೂರಿನ ಎಂ.ಟಿ.ಪ್ರಸಾದ್ ಮತ್ತು ಚಾಲಕ, ಕಣ್ಣೂರು ನಿವಾಸಿ ರಘೂತ್ತಮನ್ ಕೆ ಅವರು ಕೆಲಸ ನಿರ್ವಹಿಸುತ್ತಿದ್ದ ಬಸ್ಸಿನಲ್ಲಿ ಲಭಿಸಿದ್ದ ಚಿನ್ನದ ಕೈಚೈನಿನ ವಾಸರುದಾರರನ್ನು ಪತ್ತೆಹಚ್ಚಿ ಅವರಿಗೆ ಹಸ್ತಾಂತರಿಸಲು ಮುಂದಾಗಿದ್ದರು. ಕೆಎಸ್‍ಆರ್‍ಟಿಸಿ ಕಾಸರಗೋಡು ಡಿಪೆÇೀ ತಲುಪಿದ ಸಂಸ್ಥೆ ಜನರಲ್ ಕಂಟ್ರೋಲಿಂಗ್ ಇನ್ಸ್‍ಪೆಕ್ಟರ್ ಪಿ. ಗಿರೀಶ್ ಚಿನ್ನವನ್ನು ವಾರಸುದರರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಕಾರ್ಯಕರ್ತರಾದ ರಾಜೇಶ್ ಪಳಂಗಾಟ್, ರಫೀಕ್ ಪಾಣಪುಳ, ಪಿ.ವಿ. ಶಿಜು ಹಾಗೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.
ಬಸ್ಸಲ್ಲಿ ಲಭಿಸಿದ ಎರಡುವರೆ ಪವನಿನ ಚಿನ್ನದ ಕೈಸರ ವಾರಸುದಾರರಿಗೆ ಹಸ್ತಾಂತರ
0
ಡಿಸೆಂಬರ್ 27, 2022
Tags