HEALTH TIPS

ಪೋಲೀಸ್ ಪಡೆಯ ರಾಜಕೀಯೀಕರಣ ಮತ್ತು ಅಪರಾಧೀಕರಣ; ಆರೋಪ ಆಶ್ಚರ್ಯಕರ: ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ: ಮುಖ್ಯಮಂತ್ರಿ


         ತಿರುವನಂತಪುರಂ: ಕೇರಳದಲ್ಲಿ ಕಾನೂನು ಸುವ್ಯವಸ್ಥೆ sಸುಸ್ಥಿತಿಯಲ್ಲಿದ್ದು, ಇಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲೇ ಹೆಸರುಪಡೆದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿರುವರು.
          ಪೋಲೀಸ್ ಇಲಾಖೆಯಲ್ಲಿ ಅಪರಾಧಿಗಳ ಪ್ರಭಾವ ಮತ್ತು ಹೆಚ್ಚುತ್ತಿರುವ ಪೆÇಲೀಸರ ಮೇಲೆ ಆರೋಪಿಗಳಾಗುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರತಿಪಕ್ಷಗಳು ಮಂಡಿಸಿದ ತುರ್ತು ನಿರ್ಣಯದ ನೋಟಿಸ್‍ಗೆ ಮುಖ್ಯಮಂತ್ರಿ ಉತ್ತರಿಸಿದರು.
          ಪೋಲೀಸ್ ಪಡೆಯಲ್ಲಿ ಹೆಚ್ಚುತ್ತಿರುವ ರಾಜಕೀಯೀಕರಣ ಮತ್ತು ಅಪರಾಧೀಕರಣದ ಆರೋಪವು ಕೇರಳದ ಪ್ರಸ್ತುತ ಸ್ಥಿತಿಯನ್ನು ತಿಳಿದಿರುವ ಯಾರೂ ಸಾಮಾನ್ಯವಾಗಿ ಎತ್ತುವಂತಿಲ್ಲ. ವಿರೋಧ ಪಕ್ಷದ ಸದಸ್ಯರ ಆರೋಪ ಅಚ್ಚರಿ ಮೂಡಿಸಿದೆ. ಪೆÇಲೀಸ್ ಪಡೆಗಳಲ್ಲಿನ ಭ್ರμÁ್ಟಚಾರದ ಕುರಿತು ಇಂಡಿಯನ್ ಪೆÇಲೀಸ್ ಫೌಂಡೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ, ಕೇರಳ ಪೆÇಲೀಸರು ಅದರ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಗುರುತಿಸಲ್ಪಟ್ಟಿದೆ. ರಾಜ್ಯದ ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂಗ್ರಹಿಸುವ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದಲ್ಲದೇ ಉತ್ತಮ ಮನ್ನಣೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಹೇಳಿದರು.
            ಯಾವುದೇ ಪ್ರಕರಣದ ತನಿಖೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿದೆ ಅಥವಾ ತನಿಖೆ ನಿಷ್ಪರಿಣಾಮಕಾರಿಯಾಗಿದೆ ಎಂದು ಯಾರೂ ಸತ್ಯದ ಆಧಾರದ ಮೇಲೆ ಹೇಳಲು ಸಾಧ್ಯವಿಲ್ಲ. ಇತ್ತೀಚಿನ ಕೆಲವು ಉದಾಹರಣೆಗಳನ್ನು ಎತ್ತಿ ಹಿಡಿದ ಮುಖ್ಯಮಂತ್ರಿ ಶರೋನ್, ಕೊಲೆ ಪ್ರಕರಣ, ನರಬಲಿ ಸೇರಿದಂತೆ ತನಿಖೆಯನ್ನು ಪರಿಣಾಮಕಾರಿಯಾಗಿ ಮತ್ತು ವೈಜ್ಞಾನಿಕವಾಗಿ ನಡೆಸಲು ಪೆÇಲೀಸರು ಕ್ರಮಕೈಗೊಳ್ಳುತ್ತಿದ್ದಾರೆ ಎಂದೂ ವಿವರಿಸಿದರು.
          ರಾಜಕೀಯೀಕರಣದ ಆರೋಪ ನಿರಾಧಾರ. 2016 ರಿಂದ 828 ಕ್ರಿಮಿನಲ್ ಪ್ರಕರಣಗಳನ್ನು ಪೆÇಲೀಸ್ ಅಧಿಕಾರಿಗಳನ್ನು ಆರೋಪಿಗಳಾಗಿ ದಾಖಲಿಸಲಾಗಿದೆ. ಪೆÇಲೀಸ್ ಅಧಿಕಾರಿಗಳ ಮೇಲಿನ ಆರೋಪಗಳ ಎಲ್ಲಾ ಪ್ರಕರಣಗಳಲ್ಲಿ ತನಿಖೆ ನಡೆಸಲಾಯಿತು ಮತ್ತು ರುಜುವಾತು ಕಂಡುಬಂದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.
          ಕಳ್ಳತನ ಪ್ರಕರಣ ಸೇರಿದಂತೆ ಪೆÇಲೀಸರೇ ಆರೋಪಿಗಳಾಗುವ ಪರಿಸ್ಥಿತಿ ಹೆಚ್ಚಾದ ಬೆನ್ನಲ್ಲೇ ಪ್ರತಿಪಕ್ಷಗಳ ತುರ್ತು ನಿರ್ಣಯದ ಸೂಚನೆ ಬಂದಿತ್ತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries