ಕೋಯಿಕ್ಕೋಡ್: ಮಹಿಳೆಯರು ಮತ್ತು ಪುರುಷರಿಗೆ ಸಮಾನ ಹಕ್ಕುಗಳನ್ನು ಒಳಗೊಂಡಿರುವ ಲಿಂಗ ಸಮಾನತೆಯ ಪ್ರತಿಜ್ಞೆಯನ್ನು ಕುಟುಂಬಶ್ರೀ ಹಿಂಪಡೆದಿದೆ ಎಂಬ ಸುದ್ದಿಯನ್ನು ಕುಟುಂಬಶ್ರೀ ನಿರ್ದೇಶಕ ಜಾಫರ್ ಮಲಿಕ್ (ಐಎಎಸ್) ನಿರಾಕರಿಸಿದ್ದಾರೆ. ಕೇಂದ್ರ ಸರಕಾರ ನೀಡಿದ ವಾಗ್ದಾನವನ್ನು ಮಲಯಾಳಂ ಭಾμÉಗೆ ಅನುವಾದಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ 'ನಯೀ ಚೇತನ', ಕೇಂದ್ರ ಉಪಕ್ರಮವು, ಹಿಂಸಾಚಾರದ ವಿರುದ್ಧ ಮತ್ತು ಲಿಂಗ ನ್ಯಾಯವನ್ನು ಖಾತ್ರಿಪಡಿಸುವ ಭಾಗವಾಗಿ ನವೆಂಬರ್ 25 ರಿಂದ ಡಿಸೆಂಬರ್ 23, 2022 ರವರೆಗೆ ದೇಶದಲ್ಲಿ ನೆರೆಕರೆ ಕೂಟಗಳ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಲಿಂಗ ಆಧಾರಿತ ಹಿಂಸಾಚಾರವನ್ನು ಗುರುತಿಸುವುದು, ಹಿಂಸೆಯ ವಿರುದ್ಧ ಧ್ವನಿ ಎತ್ತುವುದು ಮತ್ತು ಸಹಾಯ ಪಡೆಯುವುದು ಮುಂತಾದ ವಿಷಯಗಳನ್ನು ಒಳಗೊಂಡ ನಾಲ್ಕು ವಾರಗಳ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
ಕಿರುಕುಳ, ಹಿಂಸಾಚಾರವನ್ನು ತಡೆಗಟ್ಟಲು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಮತ್ತು ಲಿಂಗ ನ್ಯಾಯದ ಕಡೆಗೆ ಸಮಾಜವನ್ನು ಶಿಕ್ಷಣ ಮಾಡುವುದು ಅಭಿಯಾನದ ಗುರಿಯಾಗಿದೆ. ಕುಟುಂಬಶ್ರೀ ಕೇರಳದಲ್ಲಿ ಅಭಿಯಾನದ ನೋಡಲ್ ಏಜೆನ್ಸಿಯಾಗಿದೆ. ನಯೀ ಚೇತನ ಅಭಿಯಾನದ ಅಂಗವಾಗಿ ಸಿದ್ಧಪಡಿಸಿದ್ದ ಪ್ರತಿಜ್ಞೆಯನ್ನು ಹಿಂಪಡೆದಿರುವ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿರುವುದು ಗಮನಕ್ಕೆ ಬಂದಿದೆ. ಕುಟುಂಬಶ್ರೀ ಪ್ರತಿಜ್ಞೆಯನ್ನು ಹಿಂಪಡೆದಿಲ್ಲ ಎಂದು ಜಾಫರ್ ಮಲಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಟುಂಬಶ್ರೀ ಪ್ರತಿಜ್ಞೆಗೆ ವಿರುದ್ಧವೂ ಸೇರಿದಂತೆ ಮುಸ್ಲಿಂ ಸಂಘಟನೆಗಳ ಒತ್ತಡದ ಹಿನ್ನಲೆಯಲ್ಲಿ ಪ್ರತಿಜ್ಞೆಯನ್ನು ಹಿಂಪಡೆಯಲಾಗಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದವು. ಆಸ್ತಿಯಲ್ಲಿ ಪುರುಷ ಮತ್ತು ಮಹಿಳೆಯ ಸಮಾನ ಹಕ್ಕು ಷರಿಯಾ ಕಾನೂನಿಗೆ ವಿರುದ್ಧವಾಗಿದೆ ಎಂಬುದು ಮುಸ್ಲಿಂ ಸಂಘಟನೆಗಳ ಟೀಕೆಯಾಗಿತ್ತು. ಪ್ರತಿಜ್ಞೆಯನ್ನು ಹಿಂಪಡೆಯುವ ಯಾವುದೇ ಸುತ್ತೋಲೆಗಳನ್ನು ಕುಟುಂಬಶ್ರೀ ಹೊರಡಿಸಿಲ್ಲ.
ಕುಟುಂಬಶ್ರೀ ಪ್ರತಿಜ್ಞೆಯನ್ನು ಹಿಂಪಡೆದಿಲ್ಲ; ಪ್ರತಿಕ್ರಿಯಿಸಿದ ನಿರ್ದೇಶಕ ಜಾಫರ್ ಮಲಿಕ್
0
ಡಿಸೆಂಬರ್ 08, 2022