ಕಾಸರಗೋಡು: ಮುಸ್ಲಿಂ ಲೀಗ್ ಬಗ್ಗೆ ಇತ್ತೀಚಿನ ದಿನಗಲಲ್ಲಿ ಸಿಪಿಎಂ ತೋರುತ್ತಿರುವ ಮೃದು ಧೋರಣೆ ಅಲ್ಪಸಂಖ್ಯಾತರ ಮತ ಬ್ಯಾಂಕ್‍ಗೆ ಸಿಪಿಎಂ ಶರಣಾಗಿರುವ ಸಂಕೇತವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಎಡ ಮತ್ತು ಬಲ ರಂಗಗಳು ರಾಜ್ಯದ ಒಟ್ಟಾರೆ ಹಿತಾಸಕ್ತಿಗಿಂತ ಸಂಘಟಿತ ಧಾರ್ಮಿಕ ಶಕ್ತಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಉಭಯ ರಂಗಗಳು ಪೈಪೋಟಿಯಲ್ಲಿ ನಿರತವಾಗಿದೆ. ಸಮಸ್ತದಂತಹ ಧಾರ್ಮಿಕ ಸಂಘಟನೆಗಳು ಏರಿದ ಧ್ವನಿಯಲ್ಲಿ ಮಾತನಾಡಿದಗಲೆಲ್ಲ ಸಿಪಿಎಂ ಹಲವು ಬಾರಿ ತನ್ನ ನಿಲುವನ್ನು ಬದಲಿಸಿಕೊಳ್ಳಬೇಕಾಗಿ ಬಂದಿದೆ. ಸಿಪಿಎಂನ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ಸಾಮಾನ್ಯ ಜನರ ಮುಂದಿಟ್ಟಿರುವುದು, ರಾಜ್ಯಪಾಲರು ಕೈಗೊಂಡಿರುವ ದೃಢ ನಿಲುವು, ಬಿಜೆಪಿ ನಡೆಸಿರುವ ಪ್ರತಿಭಟನೆಗಳಿಂದ ಎಡರಂಗ ಕುಗ್ಗಿಹೋಗಿದೆ. ಸಾರ್ವಜನಿಕ ಸಮಸ್ಯೆಗಳು ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿ ತನ್ನ ಲೋಕಸಭಾ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದೆ ಎಂದು ಎಂ. ಟಿ ರಮೇಶ್ ಹೇಳಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್ ಸಮಾರಂಭ ಉದ್ಘಾಟಿಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್, ಎ.ವೇಲಾಯುಧನ್, ಎಂ. ಸಂಜೀವ ಶೆಟ್ಟಿ, ಪ್ರಮಿಳಾ ಸಿ. ನಾಯ್ಕ್, ವಿಜಯ್ ಕುಮಾರ್ ರೈ ಮುಂತಾದವರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತ ವೋಟ್ ಬ್ಯಾಂಕ್ ಮೇಲೆ ಕಣ್ಣು: ಸಿಪಿಎಂನ ದ್ವಂದ್ವ ನಿಲುವು ಸಾಕ್ಷಿ
0
ಡಿಸೆಂಬರ್ 18, 2022
Tags