ಕುಂಬಳೆ: ವಿದ್ಯಾರ್ಥಿ ಘರ್ಷಣೆಗೆ ಕುಖ್ಯಾತಿ ಪಡೆಯುತ್ತಿರುವ ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರ ಮಧ್ಯೆ ಹೊಡೆದಾಟ ನಡೆದಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪರಸ್ಪರ ಪಾನಿಪೂರಿ ತಿನ್ನಿಸಿದ ವಿಚಾರ ಪ್ರಶ್ನಿಸಿರುವುದಕ್ಕೆ ಸಂಬಂಧಿಸಿ ಹೊಡೆದಾಟ ಆರಂಭಗೊಂಡಿತ್ತು. ನಂತರ ಪೊಲೀಸರ ಮಧ್ಯ ಪ್ರವೇಶಿಸಿ ಗುಂಪನ್ನು ಚದುರಿಸಿದ್ದಾರೆ.
ಕುಂಬಳೆ ಪೇಟೆಯಲ್ಲಿ ಗುರುವಾರ ಘಟನೆ ನಡೆದಿದ್ದು, ಸಂಜೆ ಶಾಲೆ ಬಿಟ್ಟ ನಂತರ ವಿದ್ಯಾರ್ಥಿನಿಯರು ಇಲ್ಲಿನ ಪಾನಿಪೂರಿ ಸ್ಟಾಲ್‍ಗೆ ಆಗಮಿಸಿದ್ದು, ಈ ಮಧ್ಯೆ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಪಾನಿಪೂರಿ ಬಾಯಿಗೆ ನೀಡಿದ್ದಾನೆ. ಆಕೆಯೂ ಆತನಿಗೆ ತಿನಿಸಿದ್ದಾಳೆ. ಇದನ್ನು ವಿದ್ಯಾರ್ಥಿನಿ ಸಂಬಂಧಿಯೊಬ್ಬ ದೂರದಿಂದ ನೋಡುತ್ತಿದ್ದು, ವಿದ್ಯಾರ್ಥಿನಿ ಸನಿಹ ತೆರಳಿ ಪ್ರಶ್ನಿಸಿದ್ದಾನೆ. ಈ ಸಂದರ್ಭ ವಿದ್ಯಾರ್ಥಿಗಳು ಒಟ್ಟುಸೇರಿ ಯುವಕನಿಗೆ ಥಳಿಸಲು ಮುಂದಾಗಿದ್ದು, ನಾಗರಿಕರು ಒಟ್ಟು ಸೇರಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ಸಂದರ್ಭ ಪೇಟೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸಿದ್ದಾರೆ.
ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಸಾಮಾನ್ಯವಾಗುತ್ತಿದ್ದು, ನಾಗರಿಕರ ಮೇಲೂ ಹಲ್ಲೆಗೆ ಮುಂದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಹಲವು ಬರಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಪ್ರಕರಣ ನಡೆದಿದ್ದು, ಶಾಲಾ ಅಧಿಕಾರಿಗಳು, ಪಿಟಿಎ ಅಥವಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಕುಂಬಳೆಯಲ್ಲಿ ಶಾಲೆ ಬಿಡುವ ವೇಳೆ ಈ ಪ್ರದೇಶದಲ್ಲಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಕುಂಬಳೆಯಲ್ಲಿ ವಿದ್ಯಾರ್ಥಿ-ನಾಗರಿಕರ ಮಧ್ಯೆ ಘರ್ಷಣೆ: ಪೊಲೀಸ್ ಮಧ್ಯ ಪ್ರವೇಶ
0
ಡಿಸೆಂಬರ್ 02, 2022