ಕಾಸರಗೋಡು: ಶಿಕ್ಷಕರ ನೇಮಕಾತಿ, ಮಂಜೂರಾತಿಯಲ್ಲಿನ ವಿಳಂಬ ತಪ್ಪಿಸಬೇಕು ಎಂದು ರಾಷ್ಟ್ರೀಯ ಶಿಕ್ಷಕರ ಪರಿಷತ್ ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅವರು ವಿವಿಧ ಬೇಡಿಕೆ ಮುಂದಿರಿಸಿ ರಾಜ್ಯಾದ್ಯಂತ ಡಿಡಿಇ ಕಚೇರಿ ಎದುರು ರಾಷ್ಟ್ರೀಯ ಶಿಕ್ಷಕರ ಪರಿಷತ್ ವತಿಯಿಂದ ಕಾಸರಗೋಡಿನಲ್ಲಿ ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ಸಹಭಾಗಿತ್ವz ಪಿಂಚಣಿ ಯೋಜನೆ ಹಿಂಪಡೆಯುವುದು, ಡಿಎ ಬಾಕಿ ಮಂಜೂರುಗೊಳಿಸುವುದು, ಎಸ್‍ಎಸ್‍ಕೆ ನೇಮಕಾತಿಗಳ ಪಾರದರ್ಶಕತೆ ಮತ್ತು ಮಧ್ಯಾಹ್ನದ ಊಟದ ಭತ್ಯೆ ನಿಯತಕಾಲಿಕ ಪರಿಷ್ಕರಣೆ ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ಆಯೋಜಿಸಲಾಗಿತ್ತು.
ಕಾಸರಗೋಡಿನಲ್ಲಿ ನಡೆದ ಧರಣಿಯ ಸಂಘಟನೆ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ರಂಜಿತ್ ಎಂ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕೆ ಪ್ರಭಾಕರ ನಾಯರ್, ರಾಜ್ಯ ಸಮಿತಿ ಸದಸ್ಯರಾದ ರಾಜೀವನ್ ಎಂ, ಸುಜಿತಾ ಟೀಚರ್, ಎನ್‍ಜಿಒ ಸಂಘದ ಜಿಲ್ಲಾ ಉಪಾಧ್ಯಕ್ಷ ರಂಜಿತ್ ಕೆ, ಜಿಲ್ಲಾ ಸಮಿತಿ ಸದಸ್ಯರಾದ ಟಿ ಕೃಷ್ಣನ್, ಅರವಿಂದಾಕ್ಷ ಭಂಡಾರಿ ುಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಐ ಮಹಾಬಲ ಭಟ್ ವಂದಿಸಿದರು.
ಶಿಕ್ಷಕರ ನೇಮಕಾತಿಯಲ್ಲಿನ ವಿಳಂಬ ತಪ್ಪಿಸಿ: ಸರ್ಕಾರಕ್ಕೆ ಎನ್‍ಟಿಯು ಆಗ್ರಹ
0
ಡಿಸೆಂಬರ್ 20, 2022
Tags