ಮಂಜೇಶ್ವರ: ನೀಲೇಶ್ವರದ ಚಾಯೋತ್ ನಲ್ಲಿ ನಡೆದ ಕಾಸರಗೋಡು ಜಿಲ್ಲಾ ಕಲೋತ್ಸವದಲ್ಲಿ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಕನ್ನಡ ಹಾಡೊಂದು ಸುದ್ಧಿ ಮಾಡಿದೆ. ಭಾμÉ ಅರಿಯದವರ ಆಂತರ್ಯವನ್ನು ಸಹ ಕನ್ನಡ ಗೀತೆಯೊಂದು ತಟ್ಟಬಲ್ಲದು ಎಂಬುದಕ್ಕೆ ಉದಾಹರಣೆ ಎಂಬಂತೆ ಮಂಜೇಶ್ವರದ ಎಸ್ ಎ ಟಿ ಶಾಲಾ ವಿದ್ಯಾರ್ಥಿನಿಯರು ಹಾಡಿದ ಹಾಡು ತೃತೀಯ ಸ್ಥಾನ ಗಳಿಸಿದೆ.
ಜಿಲ್ಲಾ ಮಟ್ಟದಲ್ಲಿ ಕನ್ನಡ ಹಾಡಿಗೆ ಸ್ಥಾನ ಸಿಗುತ್ತಿರುವುದು ಬಹಳ ಅಪರೂಪ. ಈ ಹಾಡನ್ನು ಇದೇ ಶಾಲೆಯ ಅಧ್ಯಾಪಕ ಗಣೇಶ್ ಪ್ರಸಾದ್ ಮಂಜೇಶ್ವರ ಅವರು ಬರೆದು ರಾಗ ಸಂಯೋಜನೆ ಮಾಡಿ ತರಬೇತಿ ನೀಡಿದ್ದಾರೆ. ಇತ್ತೀಚೆಗೆ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲೂ ಇವರು ರಚಿಸಿ ರಾಗ ಸಂಯೋಜನೆ ಮಾಡಿದ ಸಮೂಹಗಾನ ಮತ್ತು ದೇಶ ಭಕ್ತಿಗೀತೆಗಳು ಪ್ರಥಮ ಸ್ಥಾನ ಪಡೆದಿದ್ದವು. ಪ್ರತಿ ಬಾರಿಯೂ ಹೊಸ ಹಾಡು ಬರೆದು ವಿದ್ಯಾರ್ಥಿಗಳನ್ನು ಸ್ಪರ್ಧಾಕಣಕ್ಕೆ ಇಳಿಯುವುದು ಇವರ ವಿಶೇಷತೆಯಾಗಿದೆ. ಈ ನಿಟ್ಟಿನಲ್ಲಿ ಇವರ ಸಾಧನೆ ಮತ್ತು ಶ್ರಮ ಶ್ಲಾಘನೀಯವಾದುದು.
ಜಿಲ್ಲಾ ಕಲೋತ್ಸವ: ಗಮನ ಸೆಳೆದ ಕನ್ನಡ ಗಾಯನಕ್ಕೆ ತೃತೀಯ
0
ಡಿಸೆಂಬರ್ 04, 2022