HEALTH TIPS

ಚೀನಾದಲ್ಲಿ ಕೋವಿಡ್‌ ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ತಳಿ ಭಾರತದಲ್ಲಿ ಪತ್ತೆ

 

            ನವದೆಹಲಿ: ದೇಶದಲ್ಲಿ ಈವರೆಗೆ, ಕೊರೊನಾ ವೈರಸ್‌ ಓಮೈಕ್ರಾನ್‌ನ ಉಪತಳಿ ಬಿಎಫ್‌.7 ಸೋಂಕಿನ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಮೂಲಗಳು ಬುಧವಾರ ತಿಳಿಸಿವೆ.

                  ಬಿಎಫ್‌.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಯಿತು.

ಗುಜರಾತ್‌ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣವನ್ನು ಪತ್ತೆ ಮಾಡಿತು. ಎರಡನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಮತ್ತೊಂದು ಪ್ರಕರಣ ಒಡಿಶಾದಲ್ಲಿ ವರದಿಯಾಗಿದೆ.

         ಚೀನಾದಲ್ಲಿ ಸದ್ಯ ಅಧಿಕ ಸಂಖ್ಯೆಯಲ್ಲಿ ಕೋವಿಡ್‌-19 ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ವೈರಸ್‌ನ ಈ ಬಿಎಫ್‌.7 ಉಪತಳಿಯೇ ಕಾರಣ ಎಂದು ಮೂಲಗಳು ತಿಳಿಸಿವೆ.

              'ಚೀನಾದಲ್ಲಿ ಓಮೈಕ್ರಾನ್‌ನ ಉಪತಳಿ ಬಿಎಫ್‌.7 ಸೋಂಕು ವೇಗವಾಗಿ ಹರಡುತ್ತಿದೆ. ಚೀನಾ ಪ್ರಜೆಗಳ ದೇಹದಲ್ಲಿ ಈ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕಿನಿಂದಾಗಿ ವೃದ್ಧಿಸಿರುವ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರಬಹುದು. ಇಲ್ಲವೇ, ಅವರಿಗೆ ನೀಡಿರುವ ಲಸಿಕೆಯು ಪರಿಣಾಮಕಾರಿಯಾಗಿರದೇ ಇರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ' ಎಂದು ಇವೇ ಮೂಲಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries