HEALTH TIPS

ಹವ್ಯಕ ಮಹಾಮಂಡಲ ಮುಳ್ಳೇರಿಯ ಮಂಡಲ ಸಭೆ ಸಂಪನ್ನ


                ಕುಂಬಳೆ: ಹವ್ಯಕ ಮಹಾಮಂಡಲ ಮುಳ್ಳೇರಿಯ ಮಂಡಲ ಸಭೆ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಿತು.
           ಮಂಡಲ ಮುಷ್ಟಿಭಿಕ್ಷಾ ವಿಭಾಗ ಪ್ರಧಾನೆ ಪದ್ಮಾವತಿ ಡಿ.ಪಿ. ಭಟ್ ದೀಪೆÇೀಜ್ವಲನ ಮಾಡಿದರು.  ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಧ್ವಜಾರೋಹಣಗೈದರು.  ಗುರುವಂದನೆ, ಗೋವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಅಕ್ಟೋಬರ್ ತಿಂಗಳ ವರದಿ ಮಂಡಿಸಿದರು. ಮಂಡಲ ಕೋಶಾಧ್ಯಕ್ಷ ಹರಿಪ್ರಸಾದ ಪೆರ್ಮುಖ ಇವರು ತಿಂಗಳ ಲೆಕ್ಕಪತ್ರ ಮಂಡಿಸಿದರು. ಮುಳ್ಳೇರಿಯ ಮಂಡಲಾಂತರ್ಗತ 12ವಲಯ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ತಮ್ಮ ತಮ್ಮ ವಲಯದ ಕಾರ್ಯಚಟುವಟಿಕೆಗಳ ಒಕ್ಟೋಬರ್ ತಿಂಗಳ ವರದಿಯನ್ನು ಮಂಡಿಸಿದರು. ವಲಯಗಳಲ್ಲಿ ಜರಗಿದ ಕ್ರೀಡೋತ್ಸವ, ಪ್ರತಿಭಾಪ್ರದರ್ಶನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಲಾಯಿತು. ಗುತ್ತಿಗಾರು ವಲಯದಲ್ಲಿ ದೀಪಾವಳಿ ಸಂದರ್ಭದಲ್ಲಿ ಸರಣಿ ಗೋಪೂಜೆ ಜರಗಿದ್ದು ದೀಪಾವಳಿಯ ಬಿದಿಗೆಯಿಂದ ದ್ವಾದಶಿಯ ವರೆಗೆ ವಲಯದ 8 ಕಡೆಗಳಲ್ಲಿ ಸಾಮೂಹಿಕವಾಗಿ ಗೋಪೂಜೆ ನಡೆದಿದ್ದು ಸಂಗ್ರಹವಾದ ಗೋನಿಧಿಯನ್ನು ಜೇಡ್ಲ ಗೋಶಾಲೆಗೆ ಸಮರ್ಪಿಸಲಾಗಿರುವ ವಿಚಾರ ವಿವರಿಸಲಾಯಿತು. .
         ಕುಂಬಳೆ ವಲಯದಲ್ಲಿ ಹವ್ಯಕ ಸಮಾಜಕ್ಕಾಗಿ ಮತ್ತು ಶ್ರೀಗುರು ಪೀಠಕ್ಕಾಗಿ ಸುದೀರ್ಘ ಕಾಲ ಸ್ತುತ್ಯರ್ಹ ಸೇವೆಗೈದ ಹಿರಿಯರಾದ ಬೋನಂತಾಯ ಮಹಾದೇವ ಭಟ್ಟ, ಮೇಣ ರಾಮಕೃಷ್ಣ ಭಟ್ಟ,  ಡಿ.ಪಿ. ಪರಮೇಶ್ವರ ಹೆಬ್ಬಾರ, ಶೇಡಿಗುಮ್ಮೆ ವಾಸುದೇವ ಭಟ್ಟ, ಕೆ. ವೆಂಕಟ್ರಮಣ ಭಟ್ಟ,  ವಿಜಯಾಸುಬ್ರಹ್ಮಣ್ಯ ಹಾಗೂ ವೆಂಕಪ್ಪ ಭಟ್ಟ ಕುಳಮರ್ವ ಅವರನ್ನು ಶಾಲು ಹೊದೆಸಿ, ಫಲ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸನ್ಮಾನಿತರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
      ಇದೇ ಸಂದರ್ಭದಲ್ಲಿ ಮಾಸದ ಮಾತೆಯರಾಗಿ ಕಾರ್ಯವೆಸಗುತ್ತಿದ್ದು ಲಕ್ಷಭಾಗಿನಿಯರಾಗಿ ತಮ್ಮ ಗುರಿ ತಲುಪಿದ ಪದ್ಮಾವತಿ ಡಿ.ಪಿ. ಭಟ್, ಪಾರ್ವತಿ ಹಿಳ್ಳೆಮನೆ ಅವರನ್ನು ಮಹಾಮಂಡಲ ಮಾತೃತ್ವಂ ಪ್ರಧಾನ ಈಶ್ವರೀ ಬೇರ್ಕಡವು ಗೌರವಿಸಿ, ಅಭಿನಂದಿಸಿ, ಸಭೆಯ ನಡವಳಿಕೆಗಳನ್ನು ಶ್ಲಾಘಿಸಿದರು. ಶ್ರೀಮಠದ ಅಂಗಸಂಸ್ಥೆಗಳಾದ ಶಾಲೆಗಳು ಕಣ್ಣಿನ ಆಸ್ಪತ್ರೆ, ಗೋಶಾಲೆಗಳು - ಇವುಗಳ ಪ್ರಾಧಾನ್ಯ, ನಮ್ಮ ಕೊಡುಗೆಗಳು, ಮುಷ್ಟಿಭಿಕ್ಷೆಯ ವಿಚಾರಗಳು, ಶ್ರೀಸವಾರಿಯ ವ್ಯವಸ್ಥೆ, ಮಾಸದ ಮಾತೆಯರು, ಗೌರವಾನ್ವಿತ ಗುರಿಕ್ಕಾರರು, ನೇಮಕಾತಿಗಳು ಮತ್ತು ವಿದ್ಯಾರ್ಥಿಗಳಿಗೆ ನಡೆಸಿದ ಕ್ರೀಡಾಕೂಟ, ನಡೆಯಲಿರುವ ಕ್ರೀಡಾಕೂಟ, ವಲಯೋತ್ಸವ ಇತ್ಯಾದಿಗಳ ಬಗ್ಗೆ ಶ್ರೀ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
       ರಾಮ ತಾರಕ ಮಂತ್ರ, ಶಾಂತಿಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries