ಕಾಸರಗೋಡು: ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೋಟೆಲ್‍ಗಳು, ರೆಸಾರ್ಟ್‍ಗಳು, ಪ್ರವಾಸಿ ಕೇಂದ್ರಗಳು ಇತ್ಯಾದಿಗಳಲ್ಲಿ ನಡೆಯುವ ಡಿಜೆ ಪಾರ್ಟಿಗಳು ಸೇರಿದಂತೆ ಕಾರ್ಯಕ್ರಮಗಳಲ್ಲಿ ನಿಷೇಧಿತ ಅಮಲು ಪದಾರ್ಥಗಳ ಬಳಕೆಯನ್ನು ತಡೆಯಲು ತಪಾಸಣೆಯನ್ನು ತೀವ್ರಗೊಳಿಸಲಾಗುವುದು. ಅಬಕಾರಿ, ಪೆÇಲೀಸ್, ಹೋಟೆಲ್‍ಗಳು ಸೇರಿದಂತೆ ವಿವಿಧ ಜಾರಿ ಸಂಸ್ಥೆಗಳು ನಡೆಸಲಿರುವ ಕ್ರಿಸ್ಮಸ್ ಹೊಸ ವರ್ಷದ ಆಚರಣೆ ಸಂಬಂಧ ಅಬಕಾರಿ ಪೆÇಲೀಸ್, ಹೋಟೆಲ್‍ಗಳು ಮತ್ತು ರೆಸಾರ್ಟ್‍ಗಳು ಮತ್ತು ಹೋಟೆಲ್-ರೆಸ್ಟೋರೆಂಟ್‍ನ ಎನ್‍ಫೆÇೀರ್ಸ್‍ಮೆಂಟ್ ಇನ್‍ಸ್ಪೆಕ್ಟರೇಟ್ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾ ಅಬಕಾರಿ ಉಪ ಆಯುಕ್ತರ ಸಭಾಂಗಣದಲ್ಲಿ ಸಭೆ ನಡೆಯಿತು. ಜಿಲ್ಲಾ ಅಬಕಾರಿ ಉಪ ಆಯುಕ್ತ ಡಿ.ಬಾಲಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಪೆÇಲೀಸ್ ನಿರೀಕ್ಷಕರಾದ ಪಿ.ಅಜಿತ್ ಕುಮಾರ್, ವಿ.ಮೋಹನನ್, ಪಿ.ಉತ್ತಮದಾಸ್, ಅಬಕಾರಿ ವೃತ್ತ ನಿರೀಕ್ಷಕ ಎಸ್.ಟೋನಿ ಐಸಾಕ್, ಹೋಟೆಲ್ ಏಂಡ್ ರೆಸ್ಟಾರೆಂಟ್, ರೆಸಾರ್ಟ್ ಪ್ರತಿಧಿಗಳು ಉಪಸ್ಥಿತರಿದ್ದರು. ಹಬ್ಬದ ದಿನಗಳಲ್ಲಿ ವಿವಿಧ ಹೆಸರಿನಲ್ಲಿ ನಡೆಯುವ ಪಾರ್ಟಿಗಳನ್ನು ಆಯೋಜಿಸುವ ಸ್ಥಳಗಳಲ್ಲಿ ಪೆÇಲೀಸ್ ಅಬಕಾರಿ ಇಲಾಖೆಗಳು ಜಂಟಿಯಾಗಿ ಶ್ವಾನದಳ ಸೇರಿದಂತೆ ವ್ಯವಸ್ಥೆಗಳನ್ನು ಬಳಸಿಕೊಂಡು ನಿಷೇಧಿತ ಅಮಲು ಪದಾರ್ಥಗಳ ಬಳಕೆಯಾಗುತ್ತಿರುವುದನ್ನು ಪತ್ತೆಹಚ್ಚಿ ತಡೆಗಟ್ಟಲು ತಪಾಸಣೆಯನ್ನು ಬಲಪಡಿಸಲು ತೀರ್ಮಾನಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ಮದ್ಯಪಾನ ಮತ್ತು ಮಾದಕ ವಸ್ತು ಸಂಬಂಧಿತ ದೂರುಗಳನ್ನು ದೂರವಾಣಿ ಮೂಲಕ ತಿಳಿಸಬಹುದು. ದೂರುದಾರರ ಹೆಸರಿನ ಗೌಪ್ಯತೆಯನ್ನು ಕಾಪಾಡಲು ಕ್ರಮಕೈಗೊಳ್ಳಲಾಗುವುದು. ನಿಯಂತ್ರಣ ಕೊಠಡಿ ಟೋಲ್ ಫ್ರೀ ಸಂಖ್ಯೆ (155358) ಅಥವಾ ನಿಯಂತ್ರಣ ಕೊಠಡಿ ಸಂಖ್ಯೆ(04994 256728)ಗಳಿಗೆ ಮಾಹಿತಿ ನೀಡಬಹುದಾಗಿದೆ.
ಕ್ರಿಸ್ಮಸ್ ಹೊಸ ವರ್ಷದ ಆಚರಣೆ:ಅಬಕಾರಿ, ಪೆÇಲೀಸರಿಂದ ಮಾದಕ ಪದಾರ್ಥ ವಿರುದ್ಧ ಬಿಗು ತಪಾಸಣೆ
0
ಡಿಸೆಂಬರ್ 28, 2022
Tags