ತಿರುವನಂತಪುರಂ: ಪಾರಶಾಲಾ ಶರೋನ್ ರಾಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾ ನ್ಯಾಯಾಲಯದಲ್ಲಿ ವಿರುದ್ದ ಹೇಳಿಕೆ ನೀಡಿದ್ದಾಳೆ. ಅಪರಾಧ ವಿಭಾಗದ ತೀವ್ರ ಒತ್ತಡಕ್ಕೆ ಮಣಿದು ತಪೆÇ್ಪಪ್ಪಿಕೊಂಡಿದ್ದೇನೆ ಎಂಬುದು ಗ್ರೀಷ್ಮಾ ರಹಸ್ಯ ಹೇಳಿಕೆ ನೀಡಿದ್ದಾಳೆ.
ನೆಯ್ಯಟ್ಟಿಂಗರ ನ್ಯಾಯಾಲಯದ ದ್ವಿತೀಯ ದರ್ಜೆ ಮ್ಯಾಜಿಸ್ಟ್ರೇಟ್ ವಿನೋದ್ ಬಾಬು ಅವರ ಮುಂದೆ ಗ್ರೀಷ್ಮಾ ಹೇಳಿಕೆ ನೀಡಿದ್ದಾಳೆ.
ಅಪರಾಧ ವಿಭಾಗದ ಅಧಿಕಾರಿಗಳು ಪ್ರಕರಣದಿಂದ ವಿನಾಯಿತಿ ನೀಡುವುದಾಗಿ ತಾಯಿ ಮತ್ತು ಚಿಕ್ಕಪ್ಪನಿಗೆ ಮನವರಿಕೆ ಮಾಡಿದರು. ಇದರ ಆಧಾರದ ಮೇಲೆ ತಪ್ಪಿತಸ್ಥರ ಅರ್ಜಿ ಸಲ್ಲಿಸಲಾಗಿತ್ತು. ಶರೋನ್‍ನನ್ನು ಕೊಲ್ಲಲು ಜ್ಯೂಸ್‍ನಲ್ಲಿ ಕೀಟನಾಶಕವನ್ನು ಹಲವು ಬಾರಿ ಬೆರೆಸಿದ್ದಾಗಿ ಗ್ರೀಷ್ಮಾ ಪ್ರಕರಣದ ತನಿಖೆ ನಡೆಸುತ್ತಿರುವ ಜಿಲ್ಲಾ ಅಪರಾಧ ವಿಭಾಗದ ಎದುರು ತಪೆÇ್ಪಪ್ಪಿಕೊಂಡಿದ್ದಾಳೆ. ಆದರೆ ಗ್ರೀಷ್ಮಾ ಗೌಪ್ಯ ಹೇಳಿಕೆಯಲ್ಲಿ ಈ ವಿಷಯಗಳನ್ನು ನಿರಾಕರಿಸಿದ್ದಾಳೆ.
ವಿಚಾರಣೆಯ ಮೊದಲ ದಿನವೇ ಗ್ರೀಷ್ಮಾ ತಪೆÇ್ಪಪ್ಪಿಕೊಂಡಿದ್ದಾಳೆ ಎಂದು ಪೆÇಲೀಸರು ತಿಳಿಸಿದ್ದಾರೆ. ಮತ್ತೊಂದು ವಿವಾಹ ನಿಶ್ಚಯಿಸಿದಾಗ ತನ್ನ ಪ್ರಿಯಕರ ಶರೋನ್‍ನಿಂದ ಮುಕ್ತಿ ಹೊಂದಲು ವಿಷ ಬೆರೆಸಿದ್ದಾಗಿ ಗ್ರೀಷ್ಮಾ ಪೋಲೀಸರಿಗೆ ತಿಳಿಸಿದ್ದಳು. ಆದರೆ, ಗ್ರೀಷ್ಮಾ ನ್ಯಾಯಾಲಯದಲ್ಲಿ ಈ ಎಲ್ಲ ಹೇಳಿಕೆಗಳನ್ನು ಬದಲಾಯಿಸಿದರು. ಪ್ರಕರಣದಿಂದ ಪಾರಾಗಲು ವಕೀಲರು ನೀಡಿದ ಸಲಹೆಯಂತೆ ಗ್ರೀಷ್ಮಾ ಹೇಳಿಕೆಯನ್ನು ಬದಲಾಯಿಸಿರಬಹುದು ಎಂದು ತನಿಖಾ ತಂಡ ಹೇಳಿದೆ.
ಶರೋನ್ ಕೊಲೆ ಪ್ರಕರಣ; ನ್ಯಾಯಾಲಯದಲ್ಲಿ ಗ್ರೀಷ್ಮಾ ಹೇಳಿಕೆ; ಅಪರಾಧ ವಿಭಾಗದ ಒತ್ತಡದ ಮೇರೆಗೆ ತಪೆÇ್ಪಪ್ಪಿರುವುದಾಗಿ ಹೇಳಿಕೆ
0
ಡಿಸೆಂಬರ್ 09, 2022