ತಿರುವನಂತಪುರಂ: ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೇರಳದಲ್ಲಿ ಮದ್ಯಪಾನ ಮಾಡಿ ಸರ್ಕಾರಕ್ಕೆ ಬೆಂಬಲ ನೀಡಿದವರ ಅಂಕಿ ಅಂಶಗಳು ಹೊರಬಿದ್ದಿವೆ. ಹೊಸ ವರ್ಷದ ಮುನ್ನಾ ದಿನವಾದ ಶನಿವಾರ ರಾಜ್ಯದಲ್ಲಿ 107.14 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಕಳೆದ ಹತ್ತು ದಿನಗಳಲ್ಲಿ ಮಲಯಾಳಿಗಳು 686.28 ಕೋಟಿ ರೂ.ಗಳ ಮದ್ಯ ಸೇವಿಸಿದ್ದಾರೆ.
ಹೊಸ ವರ್ಷದ ಮದ್ಯ ಮಾರಾಟದಲ್ಲಿ ತಿರುವನಂತಪುರದ ಪವರ್ ಹೌಸ್ ರಸ್ತೆಯ ಔಟ್ಲೆಟ್ ಅಗ್ರಸ್ಥಾನದಲ್ಲಿದೆ. ಕೊಲ್ಲಂ ಆಶ್ರಮಮ್ ಔಟ್ಲೆಟ್ ಎರಡನೇ ಸ್ಥಾನದಲ್ಲಿದೆ. ಹೊಸ ವರ್ಷದ ದಿನದಂದು ಕೇರಳದಲ್ಲಿ 95.67 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ. ಕ್ರಿಸ್ಮಸ್-ಹೊಸ ವರ್ಷದ ಅವಧಿಯಲ್ಲಿ 649.32 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ.
ಡಿಸೆಂಬರ್ 22, 23 ಮತ್ತು 24ರಂದು ಕೇರಳದಲ್ಲಿ ಬರೋಬ್ಬರಿ 229.80 ಕೋಟಿ ರೂ.ಗಳ ಮದ್ಯ ಮಾರಾಟ ನಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 215.49 ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು. ಹೊಸ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಹೆಚ್ಚಿನ ಮದ್ಯಪ್ರಿಯರು ರಮ್ ನ್ನು ನೆಚ್ಚಿಕೊಂಡಿದ್ದರು ಎಂದು ಹೇಳಲಾಗಿದೆ.
ಮದ್ಯಪಾನಿಗಳಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ಕೊಡುಗೆ: 10 ದಿನಗಳಲ್ಲಿ 686.28 ಕೋಟಿ ಮೌಲ್ಯದ ಮದ್ಯ ಸೇವನೆ- ಕೇರಳದಲ್ಲಿ ದಾಖಲೆಯ ಮದ್ಯ ಮಾರಾಟ
0
ಜನವರಿ 02, 2023