HEALTH TIPS

ಬರೋಬ್ಬರಿ 100 ಕೋಟಿ ರೂ. ವಂಚನೆ! ಖತರ್ನಾಕ್​ ದಂಪತಿಯ ಲಕ್ಷುರಿ ಜೀವನ ಕಂಡು ದಂಗಾದ ಪೊಲೀಸರು

 

              ಕಾಕ್ಕನಾಡ: ಕೇರಳದ ಷೇರು ಮಾರುಕಟ್ಟೆ ಹಗರಣಕ್ಕೆ ಸಂಬಂಧಿಸಿದಂತೆ ದಂಪತಿ ಎಬಿನ್ ವರ್ಗೀಸ್ ಮತ್ತು ಅವರ ಪತ್ನಿ ಶ್ರೀರಂಜಿನಿ ಮಾಡಿರುವ ಆರ್ಥಿಕ ವಂಚನೆ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

                 ಗುರುವಾರವಷ್ಟೇ ದಂಪತಿಯನ್ನು ಬಂಧಿಸಲಾಗಿದ್ದು, ಇದರ ಹೊರತಾಗಿ ಎನ್‌ಆರ್‌ಐಗಳು, ಚಲನಚಿತ್ರ ತಾರೆಯರು ಮತ್ತು ಇತರರನ್ನು ಒಳಗೊಂಡಂತೆ ಶ್ರೀಮಂತರಿಗೆ ವಂಚಿಸಿದ ಹಣವನ್ನು ಖತರ್ನಾಕ್​ ದಂಪತಿ ಹೇಗೆ ಖರ್ಚು ಮಾಡಿದರು ಎಂಬ ವಿವರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

                  ಜೂಜಾಟಕ್ಕೆ ಕೋಟಿಗಟ್ಟಲೆ ಹಣವನ್ನು ಇಬ್ಬರು ಖರ್ಚು ಮಾಡಿದ್ದಾರೆ. ಅಲ್ಲದೆ, ವಿದೇಶಿ ಪ್ರವಾಸ, ಐಷಾರಾಮಿ ಕಾರುಗಳ, ಫ್ಲ್ಯಾಟ್​ಗಳು, ಸೂಪರ್​ ಮಾರುಕಟ್ಟೆಗಳು ಮತ್ತು ಕ್ರಿಕೆಟ್​ ಕ್ಲಬ್​ ಸಹ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಗೋವಾದಲ್ಲಿ ಕ್ಯಾಸಿನೋಗೆ ಸುಮಾರು 50 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಈ ಸಂಗತಿಗಳನ್ನು ತಿಳಿದ ಪೊಲೀಸರೇ ದಂಗಾಗಿದ್ದಾರೆ.

               ಥ್ರಿಕ್ಕಾಕರ ದೇವಸ್ಥಾನದ ಬಳಿಯ ಎಸ್‌ಎಫ್‌ಎಸ್ ಗ್ರ್ಯಾಂಡ್ ವಿಲ್ಲಾದಲ್ಲಿ ನೆಲೆಸಿರುವ ಎಬಿನ್ ವರ್ಗೀಸ್ ಮತ್ತು ಶ್ರೀರಂಜಿನಿ ದಂಪತಿಯನ್ನು ದುಬೈನಿಂದ ಮರಳುವಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಪೊಲೀಸರ ಪ್ರಕಾರ ಆರೋಪಿ ದಂಪತಿ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಭಾರಿ ಆದಾಯದ ಭರವಸೆ ನೀಡಿ, ಶ್ರೀಮಂತರನ್ನು ವಂಚಿಸಿ, ಹಣವನ್ನು ಲಪಟಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ಗೊತ್ತಾದ ಬೆನ್ನಲ್ಲೇ ದಂಪತಿಯಿಂದ ವಂಚನೆಗೆ ಒಳಗಾಗಿರುವ ಸುಮಾರು 119 ಮಂದಿ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಖತರ್ನಾಕ್​ ದಂಪತಿ 100 ಕೋಟಿ ರೂ. ವಂಚನೆ ಮಾಡಿದ್ದಾರೆ.

            2013ರಲ್ಲಿ ದಂಪತಿ, ಥ್ರಿಕ್ಕಾಕರದಲ್ಲಿ ಮಾಸ್ಟರ್ ಫಿನ್ಕಾರ್ಪ್ ಎಂಬ ಹಣಕಾಸು ಸಂಸ್ಥೆಯನ್ನು ಪ್ರಾರಂಭಿಸಿದರು. ನಂತರದ ನಾಲ್ಕು ವರ್ಷಗಳ ಕಾಲ ಅವರು ಶ್ರೀಮಂತರಿಂದ ಹಣವನ್ನು ಸಂಗ್ರಹಿಸಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರು. ಇದಲ್ಲದೆ, ಎರ್ನಾಕುಲಂನಲ್ಲಿ ಮಾಸ್ಟರ್ಸ್ ಕ್ಲಬ್ ಎಂಬ ಕ್ರಿಕೆಟ್ ಕ್ಲಬ್ ಅನ್ನು ಪ್ರಾರಂಭಿಸಿದರು. ಇದರ ಜೊತೆಗೆ ಮಾಸ್ಟರ್ಸ್ ಫಿನ್ ಸರ್ವ್ ಮತ್ತು ಮಾಸ್ಟರ್ಸ್ ಫಿನ್ ಕೇರ್ ಮೂಲಕವೂ ಹಣ ಲಪಟಾಯಿಸಿದ್ದಾರೆ ಎಂದು ತಿಳಿದುಬಂದಿದೆ.

            ಗುರುವಾರ (ಜ.5) ಕಾಕ್ಕನಾಡ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದಂಪತಿಯನ್ನು ಜನವರಿ 19 ರವರೆಗೆ ಸೆರೆಮನೆ ವಾಸಕ್ಕೆ ಕಳುಹಿಸಿದೆ. ಇದಕ್ಕೂ ಮುನ್ನ ದಂಪತಿಯನ್ನು ಬುಧವಾರ ದೆಹಲಿಯಿಂದ ಕರೆತರಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries