ಕಾಸರಗೋಡು: ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ) 107ನೇ ಸಂಸ್ಥಾಪನಾ ದಿನವನ್ನು ಕಾಸರಗೋಡು ಸಿಪಿಸಿಆರ್‍ಐ ಸಭಾಂಗಣದಲ್ಲಿ ಆಚರಿಸಲಾಯಿತು. ಕಾಸರಗೋಡಿನಲ್ಲಿ 1916 ರಲ್ಲಿ ಕಾಸರಗೋಡಿನಲ್ಲಿ ತೆಂಗು ಸಂಶೋಧನಾ ಕೇಂದ್ರ 1970 ರಲ್ಲಿ ಸಿಪಿಸಿಆರ್‍ಐ ಆಗಿ ವಿಸ್ತರಿಸಲಾಗಿದೆ.
ಸಿಪಿಸಿಆರ್‍ಐ ಉಪ ಮಹಾನಿರ್ದೇಶಕ ಡಾ.ಎ.ಕೆ. ಸಿಂಗ್ ಸಮಾರಂಭವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿದರು. ಐಸಿಎಆರ್ ಮಾಡಿದ ಅದ್ಭುತ ಕಾರ್ಯವನ್ನು ಶ್ಲಾಘಿಸಿದ ಅವರು ಜನರ ಬೇಡಿಕೆಯನ್ನು ಪೂರೈಸಲು ತೋಟದ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸಹಾಯಕ ಮಹಾನಿರ್ದೇಶಕ ಡಾ.ವಿ.ಬಿ. ಪಟೇಲ್‍ಪ್ರಾಸ್ತಾವಿಕ ಮಾತನಾಡಿದರು. ಡಾ. ವಿ.ಬಿ. ಪಟೇಲ್, ಸಹಾಯಕ ನಿರ್ದೇಶಕರು (ಹಣ್ಣುಗಳು ಮತ್ತು ತೋಟದ ಬೆಳೆಗಳು), ಡಾ. ಪಾಂಡೆ, ಸಹಾಯಕ ನಿರ್ದೇಶಕರು ಜನರಲ್(ಹೂಗಾರಿಕೆ ಮತ್ತು ತರಕಾರಿಗಳು) ಚಿvಡಿu ಐಸಿಎಆರ್ ನವದೆಹಲಿಯ ಪ್ರಧಾನ ಕಛೇರಿಯಿಂದ ಆನ್‍ಲೈನ್ ಮೂಲಕ ಪಾಲ್ಗೊಂಡಿದ್ದರು.
ಐಸಿಎಆರ್-ಐಐಎಸ್‍ಆರ್ ಕೋಯಿಕ್ಕೋಡಿನ ನಿವೃತ್ತ ನಿರ್ದೇಶಕ ಡಾ.ನಿರ್ಮಲ್ ಬಾಬು ಅವರು ಡಾ.ಕೆ.ವಿ. ಅಹಮದ್ ಬಾವಪ್ಪ ಸ್ಮಾರಕ ಉಪನ್ಯಾಸ ನೀಡಿದರು. ಸಂಸ್ಥೆಗಿರುವ ವಿವಿಧ ಪ್ರಶಸ್ತಿಗಳನ್ನು ಪುತ್ತೂರಿನ ಐಸಿಎಆರ್-ಡಿಸಿಆರ್ ನಿರ್ದೇಶಕ ಡಾ. ದಿನಕರ ಅಡಿಗ ವಿತರಿಸಿದರು. ಡಾ.ವಿನಾಯಕ ಹೆಗಡೆ, ಡಾ.ವಿ.ಎಚ್ ಪ್ರತಿಭಾ, ಡಾ. ರಾಜ್‍ಕುಮಾರ್, ಡಾ. ದಲಿಯಾ ಮೋಲ್, ಡಾ.ಸಿ.ತಂಬನ್, ಡಾ. ಎಂ.ಕೆ ರಾಜೇಶ್ ಅವರನ್ನೊಳಗೊಂಡ ತಂಡಕ್ಕೆ ಅಂತರ್ ಶಿಸ್ತೀಯ ಪ್ರಶಸ್ತಿ ನೀಡಲಾಯಿತು. ಡಾ.ಟಿ.ಶಿವಕುಮಾರ್ ಅವರಿಗೆ ಅತ್ಯುತ್ತಮ ತಾಂತ್ರಿಕ ಸಿಬ್ಬಂದಿ ಪ್ರಶಸ್ತಿಯನ್ನು ನೀಡಲಾಯಿತು. ಡಾ.ಕೆ.ಬಿ. ಹೆಬ್ಬಾರ್ ಸ್ವಾಗತಿಸಿದರು. ಪಿ. ಕೃಷ್ಣ ಕುಮಾರ್ ವಂದಿಸಿದರು.
ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಪಿಸಿಆರ್‍ಐ) 107ನೇ ಸಂಸ್ಥಾಪನಾ ದಿನಾಚರಣೆ
0
ಜನವರಿ 15, 2023
Tags