HEALTH TIPS

ಅಮೆರಿಕದಲ್ಲಿ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್; 10 ಸಾವು, ಪೊಲೀಸ್ ದೌಡು

 

             ಲಾಸ್ ಎಂಜಲೀಸ್: ಅಮೆರಿಕದಲ್ಲಿ ನಡೆಯುತ್ತಿದ್ದ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್ ಸಂಭವಿಸಿದ್ದು, ಈ ವೇಳೆ ಹಲವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

               ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ನಲ್ಲಿ ಈ ಶೂಟೌಟ್  ನಡೆದಿದೆ. ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು ಈ ವೇಳೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಆಗಂತುಕ ದಾಳಿ ನಡೆಸಿದ್ದಾನೆ.

                  ಲಾಸ್​ಏಂಜಲೀಸ್ ನಗರದ (Los Angeles) ಸಮೀಪ ಇರುವ ಮಾಂಟೆರೆ ಪಾರ್ಕ್​ನಲ್ಲಿ ಶನಿವಾರ ರಾತ್ರಿ ಅಪರಿಚಿತ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ (Shooting) ಕನಿಷ್ಠ 10 ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಸತ್ತವರ ಮತ್ತು ಗಾಯಗೊಂಡವರ ನಿಖರ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಗುಂಡಿನ ದಾಳಿ ನಡೆದಿರುವುದನ್ನು 'ಲಾಸ್​ಏಂಜಲೀಸ್ ಟೈಮ್ಸ್​' ವರದಿಯು ದೃಢಪಡಿಸಿದೆ.

                ಕ್ಯಾಲಿಫೋರ್ನಿಯಾದ ಸ್ಥಳೀಯ ಕಾಲಮಾನ ಶನಿವಾರ ರಾತ್ರಿ 10 ಗಂಟೆಯ ವೇಳೆಗೆ ಈ ದುರ್ಘಟನೆ ನಡೆದಿದೆ. ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು (Chinese New Year Party) ಈ ವೇಳೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಲಾಸ್​ಏಂಜಲೀಸ್ ಕೌಂಟಿಯಲ್ಲಿರುವ ಮಾಂಟೆರೆ ಪಾರ್ಕ್​​ ಲಾಸ್​ಏಂಜಲೀಸ್ ನಗರದಿಂದ 11 ಕಿಮೀ ದೂರದಲ್ಲಿದೆ. ಇದೇ ಸಂದರ್ಭದಲ್ಲಿ ಆಗಂತುಕ ಗುಂಡಿನ ದಾಳಿ ನಡೆಸಿದ್ದಾನೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries