ಕಾಸರಗೋಡು: ಮೀನುಗಾರಿಕಾ ದೋಣಿಯೊಂದು ಮುಗುಚಿದ ಘಟನೆ ಕಾಸರಗೋಡಿನ ಅಜಾನೂರು ಚಿತ್ತಾರಿಯಲ್ಲಿ ನಡೆದಿದೆ. ಹತ್ತು ಜನರು ಸಮುದ್ರಕ್ಕೆಸೆಯಲ್ಪಟ್ಟರೂ ಬಳಿಕ ಸಾಹಸಮಯವಾಗಿ ಅವರನ್ನು ರಕ್ಷಿಸಲಾಯಿತು.
ಅಜನೂರು ಕಾಟಾಪುರದ ಬಿಬೀಶ್ ಎಂಬುವವರ ಮಾಲಕತ್ವದ ಶಿವಂ ಎಂಬ ಹೆಸರಿನ ದೋಣಿ ಅಪಘಾತಕ್ಕೀಡಾಗಿದೆ. ಈ ಗುಂಪು ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿತ್ತು. ಬೆಳಗ್ಗೆ 11 ಗಂಟೆಗೆ ದಡದಿಂದ ಐದು ನಾಟಿಕಲ್ ಮೈಲು ದೂರದಲ್ಲಿ ಅಪಘಾತ ಸಂಭವಿಸಿದೆ.
ಅವರೊಂದಿಗಿದ್ದ ಶ್ರೀಕುರುಂಬ ಮತ್ತು ವಾಲಕರ್ ದೋಣಿಯಲ್ಲಿದ್ದ ಮೀನುಗಾರರು ಸಂತ್ರಸ್ತರನ್ನು ರಕ್ಷಿಸಲು ಮುಂದಾದರು. ಸಮುದ್ರದಲ್ಲಿ ಬಿದ್ದವರನ್ನೆಲ್ಲ ರಕ್ಷಿಸಿದರು. ದಡಕ್ಕೆ ತಂದವರಲ್ಲಿ ಏಳು ಮಂದಿ ಮೀನುಗಾರರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ.
ಕಾಸರಗೋಡಲ್ಲಿ ಮುಗುಚಿದ ಮೀನುಗಾರಿಕಾ ದೋಣಿ: ಎಲ್ಲಾ 10 ಮೀನುಗಾರರ ರಕ್ಷಣೆ
0
ಜನವರಿ 24, 2023