ಕೊಚ್ಚಿ : ಕೊಲೆ ಯತ್ನ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಲಕ್ಷದ್ವೀಪದ ಮಾಜಿ ಸಂಸದ ಮೊಹಮ್ಮದ್ ಫೈಸಲ್ ಅವರಿಗೆ ವಿಧಿಸಿದ್ದ 10 ವರ್ಷ ಜೈಲು ಶಿಕ್ಷೆಯನ್ನು ಕೇರಳ ಹೈಕೋರ್ಟ್ ಅಮಾನತ್ತಿನಲ್ಲಿಟ್ಟಿದೆ.
ಫೈಸಲ್ ಅವರ ಸಹೋದರ ಸೇರಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿತರ ಮೂರು ಮಂದಿಗೂ ಇದೇ ರಿಲೀಫ್ ಸಿಕ್ಕಿದೆ.
ಲಕ್ಷದ್ವೀಪ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಅಪರಾಧಿಗಳು ಕೇರಳ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಕೇರಳ ಹೈಕೋರ್ಟ್‌ನ ಈ ತೀರ್ಪಿಗೆ ಲಕ್ಷದ್ವೀಪ ಆಡಳಿತವು ವಿರೋಧ ವ್ಯಕ್ತಪಡಿಸಿದ್ದು, 'ಇಂಥ ತೀರ್ಪುಗಳು ನ್ಯಾಯಾಲಯದ ಮೇಲಿನ ಜನರ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ' ಎಂದಿದೆ.
ಪ್ರಕರಣದಲ್ಲಿ ಸುಮಾರು 37 ಮಂದಿ ಅರೋಪಿಗಳಿದ್ದರು. ಈ ಪೈಕಿ ಇಬ್ಬರು ವಿಚಾರಣೆ ವೇಳೆ ಮೃತಪಟ್ಟಿದ್ದರು. ಕೊನೆಗೆ ಪ್ರಕರಣದಲ್ಲಿ ಫೈಸಲ್ ಸೇರಿ ಒಟ್ಟು 4 ಮಂದಿಯನ್ನು ದೋಷಿ ಎಂದು ಪರಿಗಣಿಸಿದ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಹೀಗಾಗಿ ಫೈಸಲ್ ತಮ್ಮ ಸಂಸತ್ ಸದಸ್ಯ ಸ್ಥಾನವನ್ನು ಕಳೆದುಕೊಂಡಿದ್ದರು.