ಕಾಸರಗೋಡು: ರಾಜ್ಯ ಸ್ಪೋಟ್ರ್ಸ್ ಕೌನ್ಸಿಲ್ ಅಧೀನದಲ್ಲಿ 2023-24 ನೇ ವರ್ಷದ ಅತ್ಲೆಟಿಕ್ಸ್, ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್‍ಬಾಲ್ ಎಂಬಿವುಗಳ ಜಿಲ್ಲಾ ಮಟ್ಟದ ಸೆಲೆಕ್ಷನ್ ಟ್ರಯಲ್ಸ್ ಜನವರಿ 13 ರಂದು ಬೆಳಿಗ್ಗೆ 8 ಗಂಟೆಯಿಂದ ನೀಲೇಶ್ವರ ಇ.ಎಂ.ಎಸ್. ಮೈದಾನದಲ್ಲಿ ನಡೆಯಲಿದೆ.
2023-24 ಅಧ್ಯಯನ ವರ್ಷದಲ್ಲಿ ಏಳು ಮತ್ತು ಎಂಟನೇ ತರಗತಿ, ಪ್ಲಸ್ ವನ್ ಮತ್ತು ಪದವಿ ಪ್ರಥಮ ವರ್ಷ, ಹಾಗೂ 14 ವಷ9 ಕ್ಕಿಂತ ಕೆಳಗಿನ ಮಹಿಳಾ ಫುಟ್‍ಬಾಲ್ ಅಕಾಡೆಮಿಗೆ ಕ್ರೀಡಾ ತಾರೆಗಳನ್ನು ಆಯ್ಕೆಮಾಡಲಾಗುತ್ತದೆ. ಪ್ರಸಕ್ತ 6 ಮತ್ತು 7 ನೇ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳು ಶಾಲಾ ಮಟ್ಟದ ಸೆಲೆಕ್ಷನ್ ನಲ್ಲಿ ಭಾಗವಹಿಸಬೇಕು. ವಾಲಿಬಾಲ್ ಗೆ ಶಾಲಾ ಮಟ್ಟದ ಸೆಲೆಕ್ಷನ್‍ನಲ್ಲಿ ಬಾಲಕರು 170 ಸೆಂಟಿಮೀಟರ್ ಹಾಗು ಬಾಲಕಿಯರು 163 ಸೆ.ಮೀ ಎತ್ತರ ಇರಬೇಕು.
ಪ್ಲಸ್ ವನ್ ಮತ್ತು ಕಾಲೇಜು ಮಟ್ಟದ ಸೆಲೆಕ್ಷನ್ ನಲ್ಲಿ ಭಾಗವಹಿಸುವ ಬಾಲಕರು 185 ಸೆ.ಮೀ ಹಾಗು ಬಾಲಕಿಯರು 170 ಸೆ.ಮೀ ಎತ್ತರ ಇರಬೇಕು. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗು ತೃತೀಯಾ ಸ್ಥಾನ ಪಡೆದವರಿಗೆ ಮತ್ತು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೂ ಒಂಭತ್ತನೇ ತರಗತಿಯ ಸೆಲೆಕ್ಷನ್ ನಲ್ಲಿ ಭಾಗವಹಿಸಬಹುದು. ಟ್ರಯಲ್ಸ್ ನಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣಪತ್ರ, ಕ್ರೀಡಾ ಪ್ರತಿಭೆಯನ್ನು ಸಾಬೀತುಪಡಿಸುವ ಪ್ರಮಾಣಪತ್ರ, ಶಾಲಾ ಅಧಿಕಾರಿಗಳು ಡೃಡೀಕರಿಸಿದ ಎಲಿಜಿಬಿಲಿಟಿ ಪ್ರಮಾಣಪತ್ರ , ಪಾಸ್‍ಪೆÇೀರ್ಟ್ ಅಳತೆಯ 2 ಭಾವಚಿತ್ರ, ಆಧಾರ್‍ಕಾರ್ಡ್, ಸ್ಪೋಟ್ರ್ಸ್ ಕಿಟ್ ಎಂಬಿವುಗಳ ಸಹಿತ ಬೆಳಿಗ್ಗೆ ಎಂಟು ಗಂಟೆಗೆ ನೀಲೇಶ್ವರ ಇ.ಎಂ.ಎಸ್. ಮೈದಾನದಲ್ಲಿ ಹಾಜರಾಗಬೇಕು. ಈ ಬಗ್ಗೆ ಮಾಃಇತಿಗಾಗಿ ದೂರವಾಣಿ ಸಂಖ್ಯೆ (7012634792, 8547900213, 9495870443)ಸಂಪರ್ಕಿಸುವಂತೆಪ್ರಕಟಣೆ ತಿಳಿಸಿದೆ.
ಸ್ಪೋಟ್ರ್ಸ್ ಕೌನ್ಸಿಲ್: 13ರಂದು ಜಿಲ್ಲಾ ಮಟ್ಟದ ಸೆಲೆಕ್ಷನ್ ಟ್ರಯಲ್
0
January 10, 2023
Tags