ನವದೆಹಲಿ:ಇದೇ ಮೊದಲ ಬಾರಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‍ಎಸ್‍ಸಿ) ಬಹು- ಹೊಣೆಗಾರಿಕೆಯ (ತಾಂತ್ರಿಕವಲ್ಲದ) ಸಿಬ್ಬಂದಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಹೊರತಾಗಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಿದೆ.
ಪರೀಕ್ಷೆ ನಡೆಯಲಿರುವ ಹದಿಮೂರು ಪ್ರಾದೇಶಿಕ ಭಾಷೆಗಳೆಂದರೆ ಉರ್ದು, ತಮಿಳು, ಮಲಯಾಳಂ , ತೆಲುಗು, ಕನ್ನಡ, ಅಸ್ಸಾಮಿ , ಬಂಗಾಳಿ, ಗುಜರಾತಿ, ಕೊಂಕಣಿ, ಮಣಿಪುರಿ, ಮರಾಠಿ, ಒಡಿಯಾ ಮತ್ತು ಪಂಜಾಬ್.
ಕೇಂದ್ರ ಗೃಹಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ವಿವರ ನೀಡಿ, ಮುಂದಿನ ದಿನಗಳಲ್ಲಿ ಎಲ್ಲ 22 ಅನುಸೂಚಿತ ಭಾಷೆಗಳನ್ನೂ ಪರೀಕ್ಷೆಗಳನ್ನು ನಡೆಸುವ ಉದ್ದೇಶವಿದೆ ಎಂದು ಹೇಳಿದರು. ಉದ್ಯೋಗಾಂಕ್ಷಿಗಳಿಗೆ ಸಮಾನ ಅವಕಾಶ ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಅನುಸಾರ 15 ಭಾಷೆಗಳಲ್ಲಿ ಪರೀಕ್ಷೇ ನಡೆಯಲಿದೆ. ಭಾಷಾ ತೊಡಕಿನಿಂದ ಯಾರಿಗೂ ಅವಕಾಶ ನಿರಾಕರಣೆಯಾಗಬಾರದು ಎನ್ನುವುದು ಉದ್ದೇಶ ಎಂದು ಸ್ಪಷ್ಟಪಡಿಸಿದರು.
"ಈ ನಡೆ, ಇಂಗ್ಲಿಷ್ ಮತ್ತು ಹಿಂದಿ ಹೊರತುಪಡಿಸಿ ಇತರ ಭಾಷೆಗಳಲ್ಲೂ ಪರೀಕ್ಷೆ ನಡೆಸಬೇಕು ಎಂಬ ವಿವಿಧ ರಾಜ್ಯಗಳ ಅದರಲ್ಲೂ ಮುಖ್ಯವಾಗಿ ದಕ್ಷಿಣ ರಾಜ್ಯಗಳ ಅಭ್ಯರ್ಥಿಗಳ ಸುಧೀರ್ಘ ಅವಧಿಯ ಬೇಡಿಕೆಯನ್ನು ಈಡೇರಿಸಲಿದೆ ಎಂದು ಹೇಳಿದರು.