ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ವತಿಯಿಂದ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಯುವಜನ ಸಂಗೀತೋತ್ಸವ 'ಸದಾ ಎನ್ನ ಹೃದಯದಲ್ಲಿ'ಕಾರ್ಯಕ್ರಮ ಜ. 14ರಂದು ಸಂಜೆ 5.45ಕ್ಕೆ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ. ನಾಗಕಿರಣ್ ನಾಯಕ್ ಮತ್ತು ವಿದುಷಿ ಶಾಂತೇರಿ ಕಾಮತ್ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ತಬಲಾದಲ್ಲಿ ಉಪೇಂದ್ರ ಮಲ್ಯ, ಹಾರ್ಮೋನಿಯಂನಲ್ಲಿ ವರುಣ್ ಮಲ್ಯ ಸಹಕರಿಸುವರು.
ಖ್ಯಾತ ವೈದ್ಯ ಡಾ. ಮಂಜುನಾಥ ಶೆಟ್ಟಿ ಸಮಾರಂಭ ಉದ್ಘಾಟಿಸುವರು.ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸುವರು. ಲೆಕ್ಕ ಪರಿಶೋಧಕಿ ತಾರಾ ಜಗದೀಶ್‍ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ನಟ, ನೃತ್ಯಗಾರ, ತಬಲಾ-ಹಾರ್ಮೋನಿಯಂ ಪಟು ವಿದ್ವಾನ್ ಉಪೇಂದ್ರ ಮಲ್ಯ ಅವರಿಗೆ ಗೌರವ ಪುರಸ್ಕಾರ ನೀಡಲಾಗುವುದು.
ರಂಗ ಚಿನ್ನಾರಿಯಿಂದ 14ರಂದು ಯುವಜನ ಸಂಗೀತೋತ್ಸವ
0
ಜನವರಿ 10, 2023
Tags