ಕೊಚ್ಚಿ: ಶಬರಿಮಲೆಯಲ್ಲಿ ವಿತರಿಸಲಾಗುವ ಅರವಣ ಪ್ರಸಾದದಲ್ಲಿ ಬಳಸುವ ಏಲಕ್ಕಿ ತಿನ್ನಲು ಯೋಗ್ಯವಾಗಿಲ್ಲ ಎಂದು ವರದಿಯಾಗಿದೆ.
ಆಹಾರ ಸುರಕ್ಷತಾ ಪ್ರಾಧಿಕಾರ ನೀಡಿರುವ ವರದಿ ಪ್ರಕಾರ 14 ಮಾರಣಾಂತಿಕ ಕೀಟನಾಶಕಗಳಿರುವುದು ಪತ್ತೆಯಾಗಿದೆ. ಎಫ್.ಎಸ್.ಎಸ್.ಎ.ಐ. ಹೈಕೋರ್ಟ್‍ಗೆ ಸಲ್ಲಿಸಿರುವ ವರದಿಯಲ್ಲಿ ಏಲಕ್ಕಿಯಲ್ಲಿ ಗಂಭೀರ ಕಾಯಿಲೆಗಳಿಗೆ ಕಾರಣವಾಗುವ ಕೀಟನಾಶಕ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ವರದಿಯು ಕೊಚ್ಚಿಯ ಸ್ಪೈಸಸ್ ಬೋರ್ಡ್ ಲ್ಯಾಬ್‍ನಲ್ಲಿನ ಪರೀಕ್ಷಾ ಫಲಿತಾಂಶಗಳ ಆಧಾರವಾಗಿಸಿದೆ. ಹೈಕೋರ್ಟ್ ನಿರ್ದೇಶನದಂತೆ ಕೊಚ್ಚಿಯ ಲ್ಯಾಬ್‍ನಲ್ಲಿ ಏಲಕ್ಕಿಯನ್ನು ಪರೀಕ್ಷಿಸಲಾಯಿತು. ಈ ವರದಿಯನ್ನು ಹೈಕೋರ್ಟ್ ಪರಿಗಣಿಸಿದೆ. ಹೈಕೋರ್ಟ್ ಸೂಚನೆಯಂತೆ ಆಹಾರ ಸುರಕ್ಷತಾ ಆಯುಕ್ತರು ನೀಡಿರುವ ವರದಿಯಲ್ಲೂ ಏಲಕ್ಕಿ ತಿನ್ನಲು ಯೋಗ್ಯವಲ್ಲ ಎಂದು ಹೇಳಿದೆ.
ಏಲಕ್ಕಿ ವಿತರಣೆ ಕುರಿತು ಅಯ್ಯಪ್ಪ ಸ್ಪೈಸಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. ಈ ಹಿಂದೆ, ಹೈಕೋರ್ಟ್ ನಿರ್ದೇಶನದಂತೆ ತಿರುವನಂತಪುರಂನಲ್ಲಿರುವ ಲ್ಯಾಬ್‍ನಲ್ಲಿ ಏಲಕ್ಕಿಯಲ್ಲಿ ಅಸುರಕ್ಷಿತ ಪ್ರಮಾಣದ ಕೀಟನಾಶಕ ಪತ್ತೆಯಾಗಿತ್ತು.
ಶಬರಿಮಲೆ ಅರವಣ ಪ್ರಸಾದದ ಏಲಕ್ಕಿಯಲ್ಲಿ 14 ಮಾರಕ ಕೀಟನಾಶಕಗಳ ಉಪಸ್ಥಿತಿ; ಹೈಕೋರ್ಟ್‍ನಲ್ಲಿ ವರದಿ ನೀಡಿದ ಆಹಾರ ಸುರಕ್ಷತಾ ಪ್ರಾಧಿಕಾರ
0
ಜನವರಿ 11, 2023
Tags