ನವದೆಹಲಿ :ಸ್ಥಳೀಯ ಸ್ಮಾರ್ಟ್‌ಫೋನ್ ಉತ್ಪಾದನೆಯನ್ನು ಚುರುಕುಗೊಳಿಸಲು ಚೀನಾದ ಸರಿಸುಮಾರು 14 ಆಯಪಲ್ ಕಂಪನಿಯ ಪೂರೈಕೆದಾರರಿಗೆ ಭಾರತ ಸರ್ಕಾರವು ಪ್ರಾಥಮಿಕ ಅನುಮತಿ ನೀಡಿದೆ ಎಂದು Bloomberg ವರದಿ ಮಾಡಿದೆ.
ಲಕ್ಷೇರ್ ಪ್ರಿಸಿಷನ್ ಹಾಗೂ ಲೆನ್ಸ್‌ಮೇಕರ್ ಸನ್ನಿ ಆಪ್ಟಿಕಲ್ ಟೆಕ್ನಾಲಜಿಯ ಘಟಕವೊಂದು ಅನುಮತಿ ಪಡೆದಿರುವ ಕಂಪನಿಗಳ ಪೈಕಿ ಸೇರಿವೆ ಎಂದು ಮೂಲಗಳನ್ನು ಉಲ್ಲೇಖಿಸಿ Bloomberg ವರದಿ ಮಾಡಿದೆ.
ಈ ಅನುಮತಿಯನ್ನು ಭಾರತದಲ್ಲಿ ಕಾರ್ಯಾಚರಿಸಲು ನೀಡಲಾಗುವ ಪೂರ್ಣಪ್ರಮಾಣದ ಅನುಮತಿಯೆಡೆಗಿನ ಹೆಜ್ಜೆ ಎಂದೇ ಹೇಳಲಾಗಿದ್ದರೂ, ಈ ಕಂಪನಿಗಳು ಭಾರತದಲ್ಲಿ ಸಹಭಾಗಿತ್ವ ಪಾಲುದಾರ ಕಂಪನಿಗಳನ್ನು ಹುಡುಕಿಕೊಳ್ಳಬೇಕಾಗಿದೆ ಎಂದು ಹೇಳಲಾಗಿದೆ.
ಭಾರತವು ಐಫೋನ್ ಉತ್ಪಾದಿಸುವ ತಾಣವಾಗಿ ಕ್ಷಿಪ್ರ ಗತಿಯಲ್ಲಿ ಬೆಳೆದಿರುವ ಹೊತ್ತಿನಲ್ಲೇ ಐಫೋನ್ ತಯಾರಿಕಾ ಕಂಪನಿಗಳು ಚೀನಾ+1 ಎಂದೇ ಕರೆಯಲಾಗುತ್ತಿರುವ ವಿಶ್ವದ ಇನ್ನಿತರ ಭಾಗಗಳಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸುವ ಪ್ರಯತ್ನದಲ್ಲಿವೆ.
ಈ ಕುರಿತು ತೈವಾನ್‌ನ DigiTimes ದಿನಪತ್ರಿಕೆಯ ಸಂಶೋಧನಾ ಘಟಕವಾದ South China Morning Post ಪತ್ರಿಕೆಯಲ್ಲಿ ಮುನ್ನೋಟ ನೀಡಿರುವ ವಿಶ್ಲೇಷಕ ಲ್ಯೂಕ್ ಲಿನ್, ಶೇ. 5ಕ್ಕಿಂತ ಕಡಿಮೆಯಿರುವ ಹಾಲಿ ಶೇಕಡಾವಾರು ಪ್ರಮಾಣಕ್ಕೆ ಹೋಲಿಸಿದರೆ, 2027ರ ವೇಳೆಗೆ ಜಗತ್ತಿನಲ್ಲಿ ತಯಾರಾಗುವ ಪ್ರತಿ ಎರಡು ಐಫೋನ್‌ಗಳ ಪೈಕಿ ಒಂದು ಐಫೋನ್ ಅನ್ನು ಭಾರತ ತಯಾರಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
2025ರ ವೇಳೆಗೆ ಭಾರತವು ವಿಶ್ವದಾದ್ಯಂತ ಜೋಡಣೆಯಾಗುವ ಐಫೋನ್‌ಗಳ ಪೈಕಿ ಶೇ. 25ರಷ್ಟು ಐಫೋನ್‌ಗಳನ್ನು ಜೋಡಿಸಲಿದೆ ಎಂದು ಜೆಪಿ ಮೋರ್ಗನ್ ಅಂದಾಜಿಸಿತ್ತು.
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಚೀನಾ ತೆಗೆದುಕೊಂಡ ಶೂನ್ಯ ಸಹಿಷ್ಣು ಕ್ರಮಗಳಿಂದಾಗಿ ಕಳೆದ ನವೆಂಬರ್ ತಿಂಗಳಲ್ಲಿ ಝೆಂಗ್‌ಝೌ ಪ್ರಾಂತ್ಯದಲ್ಲಿನ ಫಾಕ್ಸ್‌ಕಾನ್‌ನ ಬೃಹತ್ ಜೋಡಣಾ ಘಟಕವನ್ನು ಮುಚ್ಚಿದ್ದರಿಂದಾಗಿ ಆಯಪಲ್ ಉತ್ಪನ್ನಗಳ ತಯಾರಿಕೆಗೆ ಮುಖ್ಯವಾಗಿ ಐಫೋನ್ ಉತ್ಪಾದನೆಗೆ ತೊಡಕುಂಟಾಗಿತ್ತು. ಹೀಗಾಗಿ ರಜಾ ಋತು ಶುರುವಾಗುವುದಕ್ಕೂ ಮುನ್ನ ಆಯಪಲ್ ಕಂಪನಿಯು ಸರಬರಾಜು ವಿಳಂಬವಾಗುವ ಸಾಧ್ಯತೆ ಇದೆ ಎಂದು ವಿರಳ ಮುನ್ಸೂಚನೆ ನೀಡಿತ್ತು.
ಭಾರತದಲ್ಲಿನ ಉತ್ಪಾದನೆಯನ್ನು ಹೆಚ್ಚಿಸಲು ಈ ಪೂರೈಕೆದಾರರಿಗೆ ಅನುಮತಿ ನೀಡುವುದು ಅನಿವಾರ್ಯವಾಗಿತ್ತು. ಸ್ಥಳೀಯ ಐಫೋನ್ ಜೋಡಣೆಯನ್ನು ಭಾರತದಲ್ಲಿನ ಉತ್ಪಾದನಾ ವಿನಿಮಯವನ್ನಾಗಿ ನೋಡಲಾಗುತ್ತಿದ್ದು, ಉತ್ಪಾದನಾ ಸಂಬಂಧಿತ ಭತ್ಯೆ ಯೋಜನೆಯಡಿ ಮತ್ತಷ್ಟು ಕಂಪನಿಗಳನ್ನು ಆಕರ್ಷಿಸಲು ಭಾರತ ಗಮನ ಕೇಂದ್ರೀಕರಿಸಿದೆ.