HEALTH TIPS

14 ವರ್ಷದ ಹುಡುಗಿಗೆ ಹೃದಯಾಘಾತ; ಸಾವಿಗೂ ಕಾರಣವಾಗಬಹುದು ಡಿಯೊಡರೆಂಟ್!

 

                ನವದೆಹಲಿ: ಚಿಕ್ಕವಯಸ್ಸಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ದಿನೇದಿನೆ ಸಂಭವಿಸುತ್ತಲೇ ಇದ್ದು, ಯಾರು ಯಾವಾಗ ಕುಸಿದು ಬಿದ್ದು ಸಾಯುವರೋ ಎಂಬ ಆತಂಕ ಕೆಲವರಲ್ಲಿ ಆವರಿಸಿದೆ. ಈ ಮಧ್ಯೆ 14 ವರ್ಷದ ಹುಡುಗಿಯೊಬ್ಬಳು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ಸಂಗತಿ ಹೊಸದೊಂದು ಎಚ್ಚರಿಕೆಯನ್ನು ನೀಡಿದೆ.

        ಜಾರ್ಜಿಯಾ ಗ್ರೀನ್ ಎಂಬ 14 ವರ್ಷದ ಹುಡುಗಿ ಡಿಯೊಡರೆಂಟ್ ಸ್ಪ್ರೇ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಳು. ಇಂಗ್ಲೆಂಡ್​ನ ಡರ್ಬಿಯಲ್ಲಿ 2022ರ ಮೇ 11ರಂದು ಆಕೆ ಇಂಥದ್ದೊಂದು ಸಾವಿಗೆ ಒಳಗಾಗಿದ್ದು, ಅವಳ ಪಾಲಕರು ತಮ್ಮ ಮಗಳಿಗೆ ಆದಂತೆ ಇನ್ನೊಬ್ಬರ ಮಕ್ಕಳಿಗೆ ಆಗಬಾರದು ಎಂಬ ಕಾಳಜಿಯಿಂದ ಇತರರಿಗೆ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.

                  ಆಕೆಯ ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ಖಚಿತಪಡದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಏರೋಸಾಲ್ ಉಸಿರಿನಲ್ಲಿ ಒಳಗೆಳೆದುಕೊಂಡಿದ್ದರಿಂದ ಸಾವು ಸಂಭವಿಸಿದೆ ಎಂಬುದು ತಿಳಿದುಬಂದಿದೆ. ಮತ್ತೊಂದೆಡೆ ಡಿಯೊಡರೆಂಟ್​ನಲ್ಲಿ ಬಳಸುವ ವಸ್ತುಗಳಲ್ಲಿ ಒಂದಾಗಿರುವ ಏರೋಸಾಲ್ ಹೃದಯಾಘಾತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

                ಏರೋಸಾಲ್ ಒಳಗೊಂಡಿರುವ ಡಿಯೊಡರೆಂಟ್ ಬಗ್ಗೆ ಅದರ ಬಾಟಲಿ ಮೇಲೆ ಸ್ಪಷ್ಟ ಎಚ್ಚರಿಕೆ ಇರುತ್ತದೆ, ಮಕ್ಕಳಿಂದ ದೂರವಿಡಿ ಎಂದೂ ಸೂಚನೆ ಬರೆದಿರುತ್ತದೆ ಎಂಬುದಾಗಿ ಬ್ರಿಟಿಷ್ ಏರೋಸಾಲ್​ ಮ್ಯಾನುಫ್ಯಾಕ್ಚರ್ಸ್​ ಅಸೋಸಿಯೇಷನ್​ (ಬಿಎಎಂಎ) ಹೇಳಿದೆ. ಆದರೆ ಈ ಎಚ್ಚರಿಕೆಯನ್ನು ದೊಡ್ಡ ಅಕ್ಷರಗಳಲ್ಲಿ ಸ್ಪಷ್ಟವಾಗಿ ಬರೆಸಬೇಕು, ನಮಗಾದಂತೆ ಇತರರಿಗೆ ಆಗಬಾರದು ಎಂಬುದಾಗಿ ಜಾರ್ಜಿಯಾ ಪಾಲಕರು ಆಗ್ರಹಿಸಿದ್ದಾರೆ.

                     ಜಾರ್ಜಿಯಾ ಮರಣ ಪ್ರಮಾಣಪತ್ರದಲ್ಲಿ ಇನ್​ಹೇಲೇಷನ್ ಆಫ್ ಏರೋಸಾಲ್ ಎಂಬುದು ಉಲ್ಲೇಖಗೊಂಡಿದೆ. ಮಾತ್ರವಲ್ಲ ಅಲ್ಲಿನ ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ (ಒಎನ್‌ಎಸ್​) ಪ್ರಕಾರ 20021ರಿಂದ 2020ರ ವರೆಗೆ ಸಂಭವಿಸಿದ ಸಾವುಗಳಲ್ಲಿ 11ರ ಡೆತ್​ ಸರ್ಟಿಫಿಕೆಟ್​ನಲ್ಲಿ ಸಾವಿಗೆ ಡಿಯೊಡರೆಂಟ್ ಕಾರಣ ಎಂದು ಉಲ್ಲೇಖಿಸಿರುವುದು ಕೂಡ ತಿಳಿದುಬಂದಿದೆ.

                 ಮಾತ್ರವಲ್ಲ ಡಿಯೊಡರೆಂಟ್​​ಗಳಲ್ಲಿ ಬಳಸುವ ಬ್ಯೂಟೇನ್ ಕೂಡ ಸಾವಿಗೆ ಕಾರಣವಾಗಬಲ್ಲುದು. 2001ರಿಂದ 2020ರ ಅವಧಿಯಲ್ಲಿ ಸತ್ತ 324 ಮಂದಿಯ ಮರಣ ಪ್ರಮಾಣಪತ್ರದಲ್ಲಿ ಡಿಯೊಡರೆಂಟ್​ನಲ್ಲಿ ಬ್ಯೂಟೇನ್ ಕಾರಣ ಎಂಬ ಉಲ್ಲೇಖವಿದೆ. ಜಾರ್ಜಿಯಾ ಬಳಸಿದ್ದ ಡಿಯೊಡರೆಂಟ್​ನಲ್ಲಿ ಪ್ರೊಪೇನ್​ ಮತ್ತು ಐಸೋಬ್ಯೂಟೇನ್ ಇದ್ದು, ಸಾವಿಗೀಡಾದ 123 ಮಂದಿಯ ಮರಣ ಪ್ರಮಾಣಪತ್ರದಲ್ಲಿ ಪ್ರೊಪೇನ್ ಮತ್ತು 38 ಮಂದಿಯ ಮರಣ ಪ್ರಮಾಣಪತ್ರದಲ್ಲಿ ಐಸೋಬ್ಯೂಟೇನ್​ ಸಾವಿಗೆ ಕಾರಣ ಎಂಬ ಉಲ್ಲೇಖವಿದೆ.

               ಬ್ಯೂಟೇನ್ ಅಥವಾ ಪ್ರೊಪೇನ್ ಅನಿಲ ಸೇವನೆ ಹೃದಯವೈಫಲ್ಯಕ್ಕೆ ಕಾರಣವಾಗಬಹುದು ಎಂದು ಒಎನ್​ಎಸ್ ತಿಳಿಸಿದೆ. ಡಿಯೊಡರೆಂಟ್ ಸ್ಪ್ರೇ ಬಳಿಕ ಹಲವರು ಸಾವಿಗೀಡಾದ ಉದಾಹರಣೆಗಳಿವೆ ಎಂಬುದಾಗಿ ರಾಯಲ್ ಸೊಸೈಟಿ ಫಾರ್ ದ ಪ್ರಿವೆನ್ಷನ್ ಆಫ್ ಆಯಕ್ಸಿಡೆಂಟ್ಸ್ ಕೂಡ ಹೇಳಿದೆ. ಏರೋಸಾಲ್​ನ ಅತಿಯಾದ ಆಘ್ರಾಣ ಅಪಾಯಕಾರಿಯಾದ್ದರಿಂದ ಕಡಿಮೆ ಪ್ರಮಾಣದಲ್ಲಷ್ಟೇ ಬಳಸಬೇಕು ಎಂಬುದನ್ನೂ ಡಿಯೊಡರೆಂಟ್ ಮೇಲೆ ಉಲ್ಲೇಖಿಸಬೇಕು ಎಂದು ಜಾರ್ಜಿಯಾ ಪಾಲಕರು ಆಗ್ರಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries