ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ನ ಎಕ್ಸ್‌ಬಿಬಿ.1.5 ತಳಿ ಸೋಂಕಿನ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ವೈರಾಣು ಸಂರಚನಾ ವಿಶ್ಲೇಷಣೆ ಸಂಸ್ಥೆ (ಐಎನ್‌ಎಸ್‌ಎಸಿಒಜಿ) ದತ್ತಾಂಶಗಳಿಂದ ಗುರುವಾರ ತಿಳಿದು ಬಂದಿದೆ.
ಛತ್ತೀಸಗಢ ಹಾಗೂ ತೆಲಂಗಾಣದಲ್ಲಿ ತಲಾ ಒಂದು ಹೊಸ ಪ್ರಕರಣ ವರದಿಯಾಗಿವೆ ಎಂದು ಸಂಸ್ಥೆ ತಿಳಿಸಿದೆ.