ಕಾಸರಗೋಡು: ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆ 26ನೇ ವಾರ್ಷಿಕೋತ್ಸವ ಜ. 15ರಂದು ಕಾಸರಗೋಡು ಬೀರಂತಬೈಲಿನ ಲಲಿತಕಲಾ ಸದನದಲ್ಲಿ ಜರುಗಲಿದೆ. ಅಂದು ಬೆಳಗ್ಗೆ 10ಕ್ಕೆ ಸಂಗೀತೋಪಾಸನೆ ಕಾರ್ಯಕ್ರಮವನ್ನು ವಿದ್ವಾನ್‍ಟಿ.ಪಿ ಶ್ರೀನಿವಾಸನ್ ಕಾಞಂಗಾಡು ಉದ್ಘಾಟಿಸುವರು.
ಪ್ರಭಾಕರ ಕುಂಜಾರು, ಬಾಲರಾಜ್ ಬೆದ್ರೋಡಿ, ಡಾ. ಮಾಯಾ ಮಲ್ಯ ವಯಲಿನ್‍ನಲ್ಲಿ ಸಹಕರಿಸುವರು. ಕೊವಾಯಿ ಕಣ್ಣನ್ ಕಾಞಂಗಾಡು, ರಾಜೀವ್ ಗೋಪಾಲ್ ವೆಳ್ಳಿಕೋತ್, ಶ್ರೀಧರ ಭಟ್ ಬಡಕ್ಕೆಕೆರೆ ಹಾಗೂ ಕೌಶಿಕ್ ರಾಮಕೃಷ್ಣನ್ ಮೃದಂಗದಲ್ಲಿ ಸಹಕರಿಸುವರು.
ಸಂಜೆ 4ಕ್ಕೆ ನಡೆಯುವ ಸಂಗೀತ ಕಛೇರಿಯಲ್ಲಿ ವಿದ್ವಾನ್ ಡಾ. ಎನ್.ಜೆ ನಂದಿನಿ ಅವರ ಹಾಡುಗಾರಿಕೆ ನಡೆಯುವುದು. ಆಲಂಕೋಡ್ ವಿ.ಎಸ್ ಗೋಕುಲ್ ವಯಲಿನ್, ಗಣೇಶ್ ಕೆ. ಬಿ.ಅಯ್ಯರ್ ಮೃದಂಗ ಹಾಗೂ ಸಜಿತ್ ವೆಳ್ಳತಂಜೂರ್ ಘಟಂನಲ್ಲಿ ಸಹಕರಿಸುವರು.
15ರಂದು ಸಂಗೀತ ಶಾಲೆ ವಾರ್ಷಿಕೋತ್ಸವ
0
ಜನವರಿ 11, 2023