ಮುಂಬೈ: ಹಿಂದಿ ಧಾರಾವಾಹಿಗಳಲ್ಲಿ ಬಾಲನಟಿಯಾಗಿ ಕೆಲಸ ಮಾಡುತ್ತಿರುವ ರುಹಾನಿಕಾ ಧವನ್ ತಮ್ಮ 15ನೇ ವಯಸ್ಸಿಗೆ ಮನೆಯನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ಬಾಲನಟಿ ರುಹಾನಿಕಾ ಧವನ್, ಸ್ಟಾರ್ ಪ್ಲಸ್ನ ಶೋ 'ಯೇ ಹೈ ಮೊಹಬ್ಬತೇನ್' ಮೂಲಕ ಖ್ಯಾತಿ ಗಳಿಸಿದ್ದಾರೆ.ಇದೀಗ ಅವರು, ತಮ್ಮ 15ನೇ ವಯಸ್ಸಿನಲ್ಲಿಯೇ ಮುಂಬೈನಲ್ಲಿ ತಮ್ಮದೇ ಆದ ಬೃಹತ್ ಮನೆಯನ್ನು
ಖರೀದಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ.
ಬಾಲ ನಟಿ,
ತನ್ನ ಹೊಸ ಮನೆಯ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು
ಚಿಕ್ಕ ವಯಸ್ಸಿನಲ್ಲಿ ನಟಿಯೊಬ್ಬಳು ತನ್ನ ಕನಸಿನ ಮನೆಯನ್ನು ಖರೀದಿಸಿರುವುದು ನಿಜಕ್ಕೂ
ದೊಡ್ಡ ಸಾಧನೆ ಎನ್ನಬಹುದು.
ರುಹಾನಿಕಾ ಧವನ್, ತಮ್ಮ ಇನ್ಸ್ಟಾ ಪೋಸ್ಟ್ನಲ್ಲಿ ಸದಾ ಪ್ರೋತ್ಸಾಹ ನೀಡಿದ ತನ್ನ ಪೋಷಕರಿಗೆ ಧನ್ಯವಾದ ಹೇಳಿದ್ದಾರೆ. ಅದರಲ್ಲೂ ನಟಿ ಕಷ್ಟಪಟ್ಟು ದುಡಿದ ಹಣವನ್ನು ಉಳಿಸಿದ ತಾಯಿಗೂ ವಿಶೇಷ ಧನ್ಯವಾದ ಹೇಳಿದ್ದಾರೆ.
'ಇದು ಆರಂಭವಷ್ಟೇ. ನಾನು ಇನ್ನೂ ದೊಡ್ಡ ಕನಸು ಕಾಣುತ್ತಿದ್ದೇನೆ. ಇನ್ನೂ ಕಷ್ಟಪಟ್ಟು ಕೆಲಸ ಮಾಡಿ ಕನಸುಗಳನ್ನು ನನಸು ಮಾಡುತ್ತೇನೆ. ಆದ್ದರಿಂದ, ನನ್ನಿಂದ ಸಾಧ್ಯವಾದರೆ, ನೀವು ಕೂಡ ಸಾಧಿಸಬಹುದು. ಆದ್ದರಿಂದ ಕನಸು ಕಾಣಿರಿ, ನಿಮ್ಮ ಕನಸುಗಳನ್ನು ಬೆನ್ನಟ್ಟಿದಾಗ ಅವು ಖಂಡಿತವಾಗಿಯೂ ಒಂದು ದಿನ ನನಸಾಗುತ್ತವೆ' ಎಂದು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ..!
ರುಹಾನಿಕಾ ಪೋಸ್ಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಯುವ ನಟಿಯ
ಸಾಧನೆಗಾಗಿ ಸೆಲೆಬ್ರಿಟಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ತಸ್ನಿಂ ನೆರೂರ್ಕರ್
'ಅಭಿನಂದನೆಗಳು ಡಿಯರ್, ನಾನು ನಿನ್ನ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ. ಶುಭಾಶಯಗಳು'
ಎಂದು ಕಾಮೆಂಟ್ ಮಾಡಿದ್ದಾರೆ. ಆಶಾ ನೇಗಿ, ಅಭಿಷೇಕ್ ಶರ್ಮಾ, ಮೈರಾ ಸಿಂಗ್, ಗವಿ ಚಾಹಲ್
ಮತ್ತು ಇತರರು ಸಹ ಅವರನ್ನು ಅಭಿನಂದಿಸಿದ್ದಾರೆ.