ಕುಂಬಳೆ: ಪೈವಳಿಕೆ ಸಮೀಪದ ಬಾಯಾರ್ ಮಖಾಂ ಉರುಸ್ ಜ 5ರಿಂದ ಪ್ರಾರಂಭಗೊಂಡಿದ್ದು, 15ರವರೆಗೆ ನಡೆಯಲಿದೆ. 5 ರಂದು ಸೈಯದ್ ಕೆ.ಎಸ್. ಅಲಿ ತಂಙಳ್ ಕುಂಬೋಲ್ ಧ್ವಜಾರೋಹಣ ನೆರವೇರಿಸಿದರು. ಕೇರಳ ಮತ್ತು ಕರ್ನಾಟಕದ ಖ್ಯಾತ ಧಾರ್ಮಿಕ ಬೋಧಕರು ವಿವಿಧ ದಿನಗಳಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಸಾದಾತ್ ಮತ್ತು ವಿದ್ವಾಂಸರ ದುಆ ಮಜ್ಲಿಸ್ ನಡೆಯಲಿದೆ. ಮೊದಲ ದಿನದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಸೈಯದ್ ಕೋಯಮ್ಮ ತಂಙಳ್ ಕೂರಾ ಉದ್ಘಾಟಿಸಿದರು.
14 ರಂದು ನಡೆಯುವ ಸಮಾರೋಪದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಾಸರ್ ಹೈದರಲಿ ಶಿಹಾಬ್ ತಂಙಳ್ ಚಾಲನೆ ನೀಡಲಿದ್ದಾರೆ. 15ರಂದು ಉರೂಸ್ ಕಾರ್ಯಕ್ರಮದಲ್ಲಿ ಕುಂಬೋಳ್ ಸೈಯದ್ ಕೆ.ಎಸ್.ಅಟ್ಟಕೋಯ ನೇತೃತ್ವದಲ್ಲಿ ಮೌಲೂದ್ ಪಠಿಸಲಾಗುವುದು.
ಈ ಬಗ್ಗೆ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಮೋನು ಹಾಜಿ, ಜಮಾತ್ ಕಾರ್ಯದರ್ಶಿ ಅಲಿ ಹಾಜಿ, ಉರೂಸ್ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್, ಮುದರಿಸ್ ಅಬ್ದುಲ್ ರಝಾಕ್ ಫೈಝಿ ಮತ್ತು ಬಶೀರ್ ಅಝ್ಹರಿ ಬಾಯಾರ್ ಮಾಹಿತಿ ನೀಡಿದರು.
ಜನವರಿ 15ರಿಂದು ಬಾಯಾರ್ ಮಖಾಂ ಉರೂಸ್
0
ಜನವರಿ 05, 2023