ತಿರುವನಂತಪುರಂ: ಕೇರಳದಲ್ಲಿ ರೈಲುಗಳ ವೇಗವನ್ನು ಗಂಟೆಗೆ 160 ಕಿ.ಮೀ.ಗೆ ಹೆಚ್ಚಿಸಲು ರೈಲ್ವೆ ಇಲಾಖೆ ಕ್ರಮಕೈಗೊಳ್ಳುತ್ತಿದೆ.
ಇದರ ಅಂಗವಾಗಿ ಲಿಡಾರ್ ಸರ್ವೆ ಟೆಂಡರ್ ನ.31ರಂದು ಆರಂಭವಾಗಲಿದೆ. ಇದರೊಂದಿಗೆ ಸಿಲ್ವರ್ ಲೈನ್‍ಗಾಗಿ ರಾಜ್ಯ ಸರ್ಕಾರ ಮಂಡಿಸಿದ ವಾದಗಳು ನೆಲಕ್ಕಚ್ಚಿದೆ. ಮುಖ್ಯವಾಗಿ ಕೇರಳದಲ್ಲಿ ರೈಲುಗಳ ವೇಗ ಕಡಿಮೆ ಇರುವುದನ್ನು ಎತ್ತಿ ತೋರಿಸಿ ಸಿಲ್ವರ್ ಲೈನ್ ಜಾರಿಗೊಳಿಸಬೇಕು ಎಂಬ ವಾದವನ್ನು ರಾಜ್ಯ ಸರ್ಕಾರ ಎತ್ತಿತ್ತು. ರೈಲ್ವೇ ಪ್ರಸ್ತುತ ಮುಂದಿನ 60 ವರ್ಷಗಳ ದೃಷ್ಟಿಯಿಂದ ಅಭಿವೃದ್ಧಿಯನ್ನು ಅನುಷ್ಠಾನಗೊಳಿಸುತ್ತಿದೆ.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ರೈಲ್ವೇ ಹಿಗಳ ವಕ್ರರೇಖೆಗಳನ್ನು ನೇರಗೊಳಿಸಲು ಮತ್ತು ಕಲ್ವರ್ಟ್‍ಗಳು ಮತ್ತು ಸೇತುವೆಗಳನ್ನು ಬಲಪಡಿಸುವ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದರೊಂದಿಗೆ ರೈಲುಗಳ ವೇಗ ಗಂಟೆಗೆ 160 ಕಿ.ಮೀ.ಗೆ ಹೆಚ್ಚಳಗೊಳ್ಳಲಿದೆ. ಯೋಜನೆಯ ಭಾಗವಾಗಿ ಭೂಸ್ವಾಧೀನ ಅಗತ್ಯವಿಲ್ಲ ಎಂದು ಅಧಿಕಾರಿಗಳು ನಂಬಿದ್ದಾರೆ.
ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಲಿಡಾರ್ ಸಮೀಕ್ಷೆಯನ್ನು ಬಳಸಲಾಗುತ್ತದೆ. ಲಿಡಾರ್ (ಲೈಟ್ ಡಿಟೆಕ್ಷನ್ ರೇಂಜಿಂಗ್) ಸಮೀಕ್ಷೆಯು ನೆಲದ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ.
ರಾಜ್ಯದಲ್ಲಿ ರೈಲುಗಳ ವೇಗ ಪ್ರಸ್ತುತ ಗಂಟೆಗೆ 90 ರಿಂದ 100 ಕಿ.ಮೀ. ಮಾತ್ರವಾಗಿದೆ. ಇನ್ನು ಕೆಲವು ರಾಜ್ಯಗಳಲ್ಲಿ 130 ಕಿ.ಮೀ.ಗಳಷ್ಟಿವೆ. ಕಳೆದ ತಿಂಗಳು, ದಕ್ಷಿಣ ರೈಲ್ವೆಯ ಉನ್ನತ ಮಟ್ಟದ ತಂಡವು ರಾಜ್ಯದ ಅಭಿವೃದ್ಧಿ ಸಾಮಥ್ರ್ಯವನ್ನು ನಿರ್ಣಯಿಸಿತ್ತು.
ಕೇಂದ್ರ ಸಚಿವ ವಿ. ಮುರಳೀಧರನ್ ಸಿಲ್ವರ್ ಲೈನ್ ವಿರೋಧಿ ಚಳವಳಿಯ ಸಂದರ್ಭದಲ್ಲಿ ವೇಗ ಹೆಚ್ಚಳದ ಬಗ್ಗೆ ಸ್ಪಷ್ಟಪಡಿಸಿದ್ದರು.
ಸಿಲ್ವರ್ಲೈನ್ ಯೋಜನೆ ನೆನೆಗುದಿಗೆ: ಹಳಿಗಳ ಉನ್ನತೀಕರಣ: ರೈಲುಗಳ ವೇಗ ಗಂಟೆಗೆ 160 ಕಿಮೀಗೆ ಹೆಚ್ಚಳ: ರೈಲ್ವೆಯಿಂದ ಯೋಜನೆ ಮುಂದುವರಿಕೆ
0
ಜನವರಿ 25, 2023