ನವದೆಹಲಿ: ಭಾರತದ ಜೈಲಿನಲ್ಲಿದ್ದ 17 ಪಾಕಿಸ್ತಾನಿ ಪ್ರಜೆಗಳನ್ನು ಭಾರತ ಶುಕ್ರವಾರ ಬಿಡುಗಡೆ ಮಾಡಿ ವಾಪಸ್ ಕಳುಹಿಸಿದೆ ಎಂದು ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್ ತಿಳಿಸಿದೆ.
"ಪಾಕಿಸ್ತಾನದ ಹೈಕಮಿಷನ್, ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಮತ್ತು ಕೇಂದ್ ಸರ್ಕಾರದ ಸಹಕಾರದಿಂದ ಭಾರತದ ಜೈಲಿನಲ್ಲಿದ್ದ ಹದಿನೇಳು ಪಾಕಿಸ್ತಾನಿ ಪ್ರಜೆಗಳನ್ನು ಇಂದು ಅಟ್ಟಾರಿ-ವಾಘಾ ಗಡಿಯ ಮೂಲಕ ವಾಪಸು ಕಳುಹಿಸಲಾಗಿದೆ" ಎಂದು ಪಾಕಿಸ್ತಾನಿ ಹೈಕಮಿಷನ್ ಟ್ವಿಟರ್‌ನಲ್ಲಿ ತಿಳಿಸಿದೆ.
"ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಕೈದಿಗಳನ್ನು ಅವರ ಶಿಕ್ಷೆಯ ಅವಧಿ ಮುಗಿದ ನಂತರ ಸ್ವದೇಶಕ್ಕೆ ಕರೆತರುವ ನಮ್ಮ ಪ್ರಯತ್ನಗಳು ಮುಂದುವರೆಯಲಿವೆ" ಎಂದು ಪಾಕ್ ಹೈಕಮಿಷನ್ ಹೇಳಿದೆ.
ಜನವರಿ 1 ರಂದು ಭಾರತವು ತನ್ನ ವಶದಲ್ಲಿರುವ 339 ಪಾಕಿಸ್ತಾನಿ ಕೈದಿಗಳು ಮತ್ತು 95 ಪಾಕಿಸ್ತಾನಿ ಮೀನುಗಾರರ ಪಟ್ಟಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿತ್ತು ಎಂದು ಪಾಕ್ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.