ತಿರುವನಂತಪುರ: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಋತುಚಕ್ರ ಮತ್ತು ಹೆರಿಗೆ ರಜೆ ನೀಡಲಾಗುವುದು.
ಉನ್ನತ ಶಿಕ್ಷಣ ಸಚಿವ ಆರ್. ಬಿಂದು ಈ ಬಗ್ಗೆ ಮಾಹಿತಿ ನೀಡಿರುವರು. 18 ವರ್ಷ ಪೂರ್ಣಗೊಂಡ ವಿದ್ಯಾರ್ಥಿನಿಯರಿಗೆ ಎರಡು ತಿಂಗಳ ಹೆರಿಗೆ ರಜೆ ನೀಡಲಾಗುವುದು. ವಿಶ್ವವಿದ್ಯಾಲಯದ ನಿಯಮಗಳಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು ಎಂದು ಸಚಿವರು ತಿಳಿಸಿದರು.
ಮೊದಲು ಕುಸಾಟ್ ನಲ್ಲಿ ಮತ್ತು ನಂತರ ಕೇರಳ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ, ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ಅವಧಿಯನ್ನು ಘೋಷಿಸಲಾಯಿತು. ಬಳಿಕ ಇದೀಗ ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರಿಗೂ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದರೊಂದಿಗೆ ವಿದ್ಯಾರ್ಥಿಗಳ ಬೇಡಿಕೆ ಪರಿಗಣನೆಯಲ್ಲಿದೆ ಎಂದು ತಿಳಿಸಿದ ಸಚಿವರು ನಂತರ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದರು.
ಇನ್ನು ಹೆಣ್ಮಕ್ಕಳು ಪರೀಕ್ಷೆಗೆ ಹಾಜರಾಗಲು ಪ್ರತಿ ಸೆಮಿಸ್ಟರ್‍ನಲ್ಲಿ ಶೇಕಡಾ 75 ರಷ್ಟು ಹಾಜರಾತಿ ಅಗತ್ಯವಿಲ್ಲ. 73ರಷ್ಟು ಹಾಜರಾತಿಯೊಂದಿಗೆ ಪರೀಕ್ಷೆ ಬರೆಯಬಹುದು. ಈ ಆದೇಶವು ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಅನ್ವಯಿಸುತ್ತದೆ.
ವಿದ್ಯಾರ್ಥಿನಿಯರಿಗೆ ಸಂತಸದ ಸುದ್ದಿ;ಇನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಋತುಚಕ್ರ ಅವಧಿಗೆ ರಜೆ: 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆರಿಗೆ ರಜೆ
0
ಜನವರಿ 19, 2023
Tags