ಈ ಕೋವಿಡ್ ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 2022ರಲ್ಲಿ ಕೋವಿಡ್ ಆತಂಕ ಕಡಿಮೆಯಾಗುತ್ತಾ ಬಂದಿತ್ತು, ಆದರೆ 2023ರಲ್ಲಿ ಮತ್ತೆ ಕೊರೊನಾ ಕೇಸ್‌ಗಳ ಆರ್ಭಟ ಹೆಚ್ಚಾಗುತ್ತಿದೆ. ಭಾರತದಲ್ಲಿ ಕೊರೊನಾ ಅಲೆ ಸೃಷ್ಟಿಯಾಗಬಹುದೇ ಎಂಬುವುದರ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈ ಕೋವಿಡ್ ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. 2022ರಲ್ಲಿ ಕೋವಿಡ್ ಆತಂಕ ಕಡಿಮೆಯಾಗುತ್ತಾ ಬಂದಿತ್ತು, ಆದರೆ 2023ರಲ್ಲಿ ಮತ್ತೆ ಕೊರೊನಾ ಕೇಸ್‌ಗಳ ಆರ್ಭಟ ಹೆಚ್ಚಾಗುತ್ತಿದೆ. ಭಾರತದಲ್ಲಿ ಕೊರೊನಾ ಅಲೆ ಸೃಷ್ಟಿಯಾಗಬಹುದೇ ಎಂಬುವುದರ ಬಗ್ಗೆ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಭಾರತದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತಿರಲು ಕಾರಣವೇನು?
ಇದೀಗ ಒಮಿಕ್ರಾನ್‌ನ BF.7.ರೂಪಾಂತರ ವೈರಸ್ ಆತಂಕ ಎದುರಾಗಿದೆ. ಈ ವೈರಸ್ ಏಕೆ
ಅಪಾಯಕಾರಿ ಎಂದರೆ ಒಬ್ಬರಿಗೆ ಬಂದರೆ ಆ ಸೋಂಕಿತ ವ್ಯಕ್ತಿಯಿಂದ 16 ಜನರಿಗೆ ಹರಡುವ
ಸಾಧ್ಯತೆ ಇದೆ. ಆದ್ದರಿಂದ BF.7. ಭಾರತದಲ್ಲಿ ವೇಗವಾಗಿ ಹರಡುತ್ತಿದ್ದು
ಎಚ್ಚರಿಕೆವಹಿಸದಿದ್ದರೆ ಮತ್ತೊಂದು ಕೊರೊನಾ ಅಲೆ ಉಂಟಾಗಬಹುದು, ಈ ಕುರಿತು ಆರೋಗ್ಯ
ಮಂತ್ರಿ ಕೆ. ಸುಧಾಕರ್ ಅವರು ಕೂಡ ಎಚ್ಚರಿಕೆ ನೀಡಿದ್ದಾರೆ.
ಭಾರತದಲ್ಲಿ ಕೇಸ್‌ಗಳು ಹೆಚ್ಚಾಗುತ್ತಿರುವುದರಿಂದ ಈ ಎರಡು ತಿಂಗಳು ತುಂಬಾನೇ ಜಾಗ್ರತೆವಹಿಸಿದರೆ ಕೊರೊನಾ ಹರಡುವುದನ್ನು ತಡೆಗಟ್ಟಬಹುದು.
BF.7. ಕೊರೊನಾದ ಲಕ್ಷಣಗಳೇನು?
ಈ ರೂಪಾಂತರ ಪ್ರತ್ಯೇಕ ಲಕ್ಷಣಗಳೇನು ಹೊಂದಿಲ್ಲ, BF.7. ಸೋಂಕು ತಗುಲಿದವರಲ್ಲಿ ಈ ಬಗೆಯ ಲಕ್ಷಣಗಳು ಕಂಡು ಬರುತ್ತದೆ
* ಚಳಿಜ್ವರ
* ಕೆಮ್ಮು
* ಉಸಿರಾಟಕ್ಕೆ ತೊಂದರೆ
* ಮೈಕೈ ನೋವು
* ತಲೆನೋವು
* ರುಚಿ ಇಲ್ಲದಿರುವುದು
* ವಾಸನೆ ಗ್ರಹಿಕೆ ಇಲ್ಲದಿರುವುದು
* ಗಂಟಲುಕೆರೆತ
* ಶೀತ
* ವಾಂತಿ
*ಬೇಧಿ
ಒಮಿಕ್ರಾನ್ BF.7. ತಡೆಗಟ್ಟಲು ಇವುಗಳು ಸಹಕಾರಿ:
ಬೂಸ್ಟರ್ ಪಡೆಯಿರಿ
ಬೂಸ್ಟರ್ ಪಡೆಯುವುದರಿಂದ ವೈರಸ್ ತಡೆಗಟ್ಟುವ ಸಾಮರ್ಥ್ಯ ಹೆಚ್ಚಲಿದೆ. ಲಸಿಕೆ
ತೆಗೆದುಕೊಂಡವರಿಗೂ ಕೊರೊನಾ ಸೋಂಕು ಹರಡುತ್ತಿದೆ ಆದ್ದರಿಂದ ಬೂಸ್ಟರ್ ತೆಗೆದುಕೊಂಡರೆ
ಹೆಚ್ಚಿನ ಸುರಕ್ಷಿತೆ ಸಿಗಲಿದೆ.
ಮಾಸ್ಕ್ ಧರಿಸಿ
ಈಗ ಮಾಸ್ಕ್ ಧರಿಸುವುದು ಕಡಿಮೆಯಾಗಿದೆ. ಆದರೆ ಮನೆಯಿಂದ ಹೊರಗಡೆ ಕಾಲಿಡುವಾಗ ಮಾಸ್ಕ್
ಧರಿಸಿ. ಬೇರೆಯವರು ಧರಿಸಿಲ್ಲ, ಅದಕ್ಕೆ ನಾನೂ ಧರಿಸಲ್ಲ ಎಂದು ಯೋಚಿಸಬೇಡಿ, ನಿಮ್ಮ
ಸುರಕ್ಷತೆಗಾಗಿ ನೀವು ಮಾಸ್ಕ್ ಧರಿಸಿ.
* ಜನ ದಟ್ಟಣೆ ಇರುವ ಕಡೆ ಓಡಾಡುವಾಗ ಡಬಲ್ ಲೇಯರ್ ಮಾಸ್ಕ್ ಧರಿಸಿ ಓಡಾಡುವುದು ನಿಮಗೆ ಹೆಚ್ಚಿನ ಸುರಕ್ಷತೆ ನೀಡುವುದು.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ
ಈ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಹೊರಗಡೆ ನೂಕು-ನುಗ್ಗಲು ಇರುವ ಕಡೆ
ಹೋಗಬೇಡಿ. ಮೆಟ್ರೋ, ಬಸ್, ರೈಲ್ವೆ ಹೀಗೆ ಸಾರ್ಬಜನಿಕ ವಾಹನಗಳಲ್ಲಿ ಸಂಚರಿಸುವಾಗ ಮಾಸ್ಕ್
ಧರಿಸಿ, ಸ್ಯಾನಿಟೈಸರ್ ಬಳಸಿ.
* ಆಫೀಸ್‌ನಲ್ಲಿ ಇನ್‌ಡೋರ್ ಗಾಳಿಯಾಡುವಂತೆ ಇರಬೇಕು, ಆಫೀಸ್‌ನಲ್ಲಿ ಕಿಟಕಿಗಳನ್ನು ತೆರೆದಿಡುವುದು, ಗಾಳಿ ಹೆಚ್ಚು ಓಡಾಡುವಂತೆ ಇರುವುದು ಸುರಕ್ಷಿತ, ಆದರೆ ಎಸಿ ಇರುವ ಕಡೆ ಹೀಗೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಆಫೀಸ್‌ನಲ್ಲೂ ಮಾಸ್ಕ್ ಧರಿಸುವುದು ಸುರಕ್ಷಿತ.
ರೋಗ ಲಕ್ಷಣಗಳು ಕಂಡು ಬಂದರೆ ಪ್ರತ್ಯೇಕವಾಗಿ ಇತರರಿಗೆ ಹರಡದಂತೆ ಎಚ್ಚರವಹಿಸಿ
* ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಐಸೋಲೇಟ್ ಆಗಿ ಇತರರಿಗೆ ರೋಗ ಹರಡುವುದನ್ನು ತಡೆಗಟ್ಟಿ.
* ಮನೆಯಲ್ಲಿಯೇ ಕಿಟ್ ಇದ್ದರೆ ಪರೀಕ್ಷೆ ಮಾಡಿ, ಇಲ್ಲದಿದ್ದರೆ ಸಮೀಪದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿ.
ಈ ಮುನ್ನೆಚ್ಚರಿಕೆವಹಿಸಿ
* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ.
* ಕೈಗಳಿಗೆ ಸ್ಯಾನಿಟೈಸ್ ಬಳಸಿ.
* ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಿರಿ
* ನೀವು ಯಾವಾಗಲೂ ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಿರಿ.
* ಕೆಮ್ಮಿದ ಮೇಲೆ, ಸೀನಿದ ಮೇಲೆ ಕೈಗಳನ್ನು ತೊಳೆಯಿರಿ.
ಆಗಾಗ ಮುಟ್ಟುವ ವಸ್ತುಗಳನ್ನು ಸ್ಯಾನಿಟೈಸ್ ಮಾಡಿ
ನಿಮ್ಮ ವರ್ಕ್ ಡೆಸ್ಕ್, ಲ್ಯಾಪ್ ಟ್ಯಾಪ್, ಮೊಬೈಲ್ ಇವುಗಳ ಸ್ಯಾನಿಟೈಸ್ ಕಡೆ ಹೆಚ್ಚು ಗಮನ ಹರಿಸಿ.
ಈ ಸಮಯದಲ್ಲಿ ನಿರ್ಲಕ್ಷ್ಯ ಬೇಡ, ಹಾಗಂತ ಭಯನೂ ಬೇಕಾಗಿಲ್ಲ, ಮುನ್ನೆಚ್ಚರಿಎಕ ಇರಲಿ ಸಾಕು.