ಕಾಸರಗೋಡು: ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ವಾರ್ತಾ ಕಛೇರಿ ಹಾಗೂ ಎ ಎಸ್ ಎ ಪಿ ಯ ಜಂಟಿ ಆಶ್ರಯ ದಲ್ಲಿ ಉದ್ಯೋಗಾರ್ಥಿಗಳಿಗಾಗಿ ಜ.19ರಿಂದ 21ರ ವರೆಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿದ್ಯಾನಗರ ಎ ಎಸ್ ಎ ಪಿ ಕಮ್ಯುನಿಟಿ ಸ್ಕಿಲ್ ಪಾರ್ಕ್ ನಲ್ಲಿ ನಡೆಯಲಿರುವ ಕಾರ್ಯಾಗಾರವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಉದ್ಘಾಟಿಸುವರು. ಜಿಲ್ಲಾ ವಾರ್ತಾಧಿಕಾರಿ ಎಂ. ಮಧುಸೂದನನ್ ಅಧ್ಯಕ್ಷತೆ ವಹಿಸುವರು. ವೃತ್ತಿ ಕೌಶಲ್ಯ ತರಬೇತಿ, ಉದ್ಯೋಗ ಸಂದರ್ಶನ ತಯಾರಿ, ರೆಸ್ಯೂಮ್ (ಬಯೋಡಾಟ ಬರೆಯುವ ರೀತಿ)ತಯಾರಿ, ಗ್ರೂಪ್ ಡಿಸ್ಕಶನ್ ಇತ್ಯಾದಿ ಇರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಿರುವ ವಿಷಯಗಳ ಕುರಿತು ಕಾರ್ಯಾಗಾರ ನಡೆಯಲಿದೆ. ಮೂರು ದಿನಗಳ ಕಾಲ ತಲಾ ಐದು ಗಂಟೆಗಳಂತೆ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
19ರಿಂದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ
0
ಜನವರಿ 14, 2023
Tags