ಭುವನೇಶ್ವರ: ಒಡಿಶಾದ ಗಂಜಾಂ ಜಿಲ್ಲೆಯ ಅಸ್ಕಾ ಪೊಲೀಸ್ ಠಾಣೆ ದೇಶದ ನಂಬರ್ 1 ಠಾಣೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ಶುಕ್ರವಾರ ನವದೆಹಲಿಯಲ್ಲಿ ನಡೆದ ಡಿಜಿಪಿ/ಐಜಿಪಿಗಳ ಸಮ್ಮೇಳನದಲ್ಲಿ ಅಸ್ಕಾ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಪ್ರಶಾಂತ ಕುಮಾರ್ ಸಾಹೋ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಶಸ್ತಿ ನೀಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.