ಕಾಸರಗೋಡು: ವಿದ್ಯಾನಗರ ವ್ಯಾಪ್ತಿಯ ಕಾಸರಗೋಡು ಕುಡಿಯುವ ನೀರಿನ ಯೋಜನೆಯ ಪ್ರಮುಖ ಸರಬರಾಜು ಪೈಪ್‍ಗಳನ್ನು ಸ್ಥಳಾಂತರಿಸಿ ಸ್ಥಾಪಿಸುವ ನಿಟ್ಟಿನಲ್ಲಿ ಜ.20 ಮತ್ತು 21ರಂದು ಕಾಸರಗೋಡು ನಗರಸಭೆ, ಚೆಂಗಳ ಮತ್ತು ಮಧೂರು ಗ್ರಾಮ ಪಂಚಾಯಿತಿ ವ್ಯಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀರುಸರಬರಾಜಿನ ಪೈಪುಗಳನ್ನು ಸ್ಥಳಾಂತರಿಸಿ ಸ್ಥಾಪಿಸಲಾಗುತ್ತಿದೆ.
ಪೈಪು ಸ್ಥಳಾಂತರ-20, 21ರಂದು ಕುಡಿಯುವ ನೀರು ಪೂರೈಕೆ ಸ್ಥಗಿತ
0
ಜನವರಿ 18, 2023
Tags