ವಾಷಿಂಗ್ಟನ್: ಹೊಸ ವರ್ಷಾಚರಣೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಶಾಕಿಂಗ್ ಎಚ್ಚರಿಕೆ ನೀಡಿದ್ದು, ಈ ವರ್ಷ ಜಗತ್ತಿನ ಮೂರನೇ ಒಂದು ಭಾಗದಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ಹೇಳಿದೆ.
ಪ್ರಪಂಚದ ಮೂರನೇ ಒಂದರಷ್ಟು ಆರ್ಥಿಕತೆ 2023ರಲ್ಲಿ ಹಿಂಜರಿತ ಅನುಭವಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಮ್‌ಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವ ಎಚ್ಚರಿಕೆ ನೀಡಿದ್ದು, ಅಮೆರಿಕ, ಐರೋಪ್ಯ ಒಕ್ಕೂಟ ಹಾಗೂ ಚೀನಾದಲ್ಲಿ ಅರ್ಥಿಕತೆ ಮಂದಗತಿಯಲ್ಲಿ ಸಾಗಲಿದ್ದು, 2023ರ ಕಠಿಣ ವರ್ಷವಾಗಲಿದೆ ಎಂದು ಅವರು ಸಿಬಿಎಸ್ ಸುದ್ದಿ ಕಾರ್ಯಕ್ರಮ "ಫೇಸ್ ದಿ ನೇಷನ್" ನಲ್ಲಿ ಹೇಳಿದ್ದಾರೆ.
2023 ವರ್ಷವು ಕಳೆದ ವರ್ಷಕ್ಕಿಂತ ಕಠಿಣವಾಗಿರುತ್ತದೆ. ರಷ್ಯಾ–ಉಕ್ರೇನ್ ಯುದ್ಧ, ಬೆಲೆ ಏರಿಕೆ, ಬಡ್ಡಿದರ ಹೆಚ್ಚಳ ಹಾಗೂ ಕೋವಿಡ್ ಪ್ರಕರಣಗಳ ಏರಿಕೆ ಮುಂತಾದವುಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಪ್ರಪಂಚದ ಮೂರನೇ ಒಂದರಷ್ಟು ಆರ್ಥಿಕತೆಗಳು 2023ರಲ್ಲಿ ಹಿಂಜರಿತಕ್ಕೆ ಒಳಗಾಗಲಿವೆ. ಆರ್ಥಿಕ ಹಿಂಜರಿತದ ಭಯ ಇಲ್ಲದ ದೇಶಗಳೂ ಕೂಡ, ಹಿಂಜರಿತದ ಪರಿಣಾಮ ಎದುರಿಸಲಿದೆ‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಲು ಐರೋಪ್ಯ ಒಕ್ಕೂಟಕ್ಕೆ ಅಸಾಧ್ಯ ಎಂದಿರುವ ಅವರು, ಅಮೆರಿಕ ಹಿಂಜರಿತದ ಅಂಚಿನಲ್ಲಿದೆ. ಚೀನಾಗೆ 2023 ತ್ರಾಸದಾಯಕವಾಗಿರಲಿದೆ. ಮುಂದಿನ ಎರಡು ತಿಂಗಳು ಚೀನಾಗೆ ಕಠಿಣವಾಗಿರಲಿದೆ. ಇದರಿಂದಾಗಿ ಚೀನಾದ ಬೆಳವಣಿಗೆ ಋಣಾತ್ಮಕವಾಗಿರಲಿದೆ. ಈ ಪ್ರದೇಶದ ಆರ್ಥಿಕತೆಗ ಹಾಗೂ ಜಾಗತಿಕ ಆರ್ಥಿಕತೆ ಮೇಲೂ ಋಣಾತ್ಮಕ ಪರಿಣಾಮ ಬೀರಲಿದೆ ಎಂದಿದ್ದಾರೆ.
ಜಾಗತಿಕ ಬೆಳವಣಿಗೆಯು 2021 ರಲ್ಲಿ ಶೇಕಡಾ 6 ರಿಂದ 2022 ರಲ್ಲಿ ಶೇಕಡಾ 3.2 ಮತ್ತು 2023 ರಲ್ಲಿ ಶೇಕಡಾ 2.7 ಕ್ಕೆ ನಿಧಾನವಾಗಲಿದೆ. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು COVID-19 ಸಾಂಕ್ರಾಮಿಕದ ತೀವ್ರ ಹಂತವನ್ನು ಹೊರತುಪಡಿಸಿ 2001 ರಿಂದ ದುರ್ಬಲ ಬೆಳವಣಿಗೆಯ ವಿವರವಾಗಿದೆ. ದೇಶದಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳ ಅಲೆಯ ನಂತರ ಚೀನಾ ತನ್ನ ಶೂನ್ಯ ಕೋವಿಡ್ ನೀತಿಯನ್ನು ರದ್ದುಗೊಳಿಸಿದೆ ಮತ್ತು ತನ್ನ ಆರ್ಥಿಕತೆಯನ್ನು ತೆರೆದಿದೆ. ಮುಂದಿನ ಎರಡು ತಿಂಗಳುಗಳಲ್ಲಿ, ಇದು ಚೀನಾಕ್ಕೆ ಕಠಿಣವಾಗಿರುತ್ತದೆ, ಮತ್ತು ಚೀನಾದ ಬೆಳವಣಿಗೆಯ ಮೇಲೆ ಪರಿಣಾಮವು ಋಣಾತ್ಮಕವಾಗಿರುತ್ತದೆ, ಪ್ರದೇಶದ ಮೇಲೆ ಪರಿಣಾಮವು ಋಣಾತ್ಮಕವಾಗಿರುತ್ತದೆ, ಜಾಗತಿಕ ಬೆಳವಣಿಗೆಯ ಮೇಲೆ ಪರಿಣಾಮವು ಋಣಾತ್ಮಕವಾಗಿರುತ್ತದೆ ಎಂದು ಅವರು ಹೇಳಿದರು.